ಈ ವರ್ಷ ಮುರಳಿಗೆ ಲಕ್ಕಿ ವರ್ಷ. ತಮ್ಮ ಹೆಸರಿನ ಎದುರು ಶ್ರೀ ಎಂದು ಸೇರಿಸಿಕೊಂಡ ನಂತರ ಇವರಿಗೆ ಕೈ ತುಂಬಾ ಅವಕಾಶಗಳು ಸಿಗುತ್ತಿವೆ. ಈಗ ಇವರ ಹೊಸ ಚಿತ್ರ 'ಮುರಾರಿ' ಸೆಟ್ಟೇರಿದೆ.
ಮುರಾರಿ ಒಂದು ಸಂದೇಶ ಸಾರುವ ಚಿತ್ರ. ನಾಯಕ ಒಬ್ಬ ಸಾಮಾನ್ಯ ಮನುಷ್ಯ. ಆತ ಟಿವಿ-ಪತ್ರಿಕೆಗಳಲ್ಲಿ ಒಬ್ಬ ಹುಡುಗಿಯನ್ನು ನೋಡುತ್ತಾನೆ. ಪ್ರೀತಿಯಲ್ಲಿ ಬೀಳುತ್ತಾನೆ. ಅದನ್ನು ಅವಳ ಮುಂದೆ ಹೇಳುತ್ತಾನೆ. ಮುಂದೇನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ನೋಡಿ ಎನ್ನುತ್ತಾರೆ ಮುರಳಿ.
MOKSHA
ಚಿತ್ರವನ್ನು ಆರ್.ಎಸ್.ಗೌಡ ನಿರ್ಮಿಸುತ್ತಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು ಎಲ್ಲಾ ಕೇಂದ್ರಗಳಲ್ಲೂ ಚಿತ್ರ ಚೆನ್ನಾಗಿ ಓಡುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ.
ದುನಿಯಾ ರಶ್ಮಿ ಇದರ ನಾಯಕಿ. ಮಾಧುರಿ ಮತ್ತೊಬ್ಬ ನಾಯಕಿ. ಬೆಂಗಳೂರು ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಸದ್ಯದಲ್ಲೇ ಮುರಳಿ ಅಭಿನಯದ 'ನಂದೇ' ಚಿತ್ರ ಸೆಟ್ಟೇರಲಿದೆ. ಮೂರು ದೇಶಗಳಲ್ಲಿ ಚಿತ್ರೀಕರಣವಾಗಲಿರುವ ಈ ಚಿತ್ರದ ಮೇಲೆ ಮುರಳಿಗೆ ಅಪಾರ ವಿಶ್ವಾಸವಿದೆ.