'ದೇವನಹಳ್ಳಿ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಶೇ 80 ರಷ್ಟು ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಪಲ್ಲಕ್ಕಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡು ಸಂಕಟ ಪಡುತ್ತಿರುವವರ ಕಥೆಯನ್ನು ಚಿತ್ರ ಒಳಗೊಂಡಿದೆ.
ಚಿತ್ರಕ್ಕೆ ದೇವನಹಳ್ಳಿ ಹತ್ತಿರ ಬೆಟ್ಟಸಲೂರು, ತರಹುಣಿಸೆ, ಎಂಬೆಸ್ಸಿ ಸ್ಕೂಲ್ ಹಾಗೂ ಯಲಹಂಕ ಸುತ್ತಮುತ್ತ ನಾಯಕ ರಾಹುಲ್ ಹಾಗೂ ನಾಯಕಿ ಶ್ರಾವಣಿ ಅಭಿನಯದ ದೃಶ್ಯಗಳನ್ನು ಚಿತ್ರೀಕರಿಸಲಾಯಿತು.
ಜಾಗತೀಕರಣದಿಂದ ಮೂಲೆ ಗುಂಪಾಗಿರುವ ರೈತನ ಕಥೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ದೇವನಹಳ್ಳಿ ಚಿತ್ರ ವಿಶಿಷ್ಟ ಹಾಗೂ ನೈಜ ಘಟನೆಗಳೊಂದಿಗೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದು ಪಲ್ಲಕ್ಕಿ ಹೇಳಿದರು.