ಅಂದು ನಮ್ಮ ಮಂಜಣ್ಣ ಕೆಂಡ ಮಂಡಲರಾಗಿದ್ದರು. 'ನಮ್ ಏರಿಯಾದಲ್ ಒಂದು ದಿನ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಮುಗಿಯುತ್ತಿದ್ದಂತೆ ಆಗಮಿಸಿದ ಮಂಜಣ್ಣ ಒಂದೇ ಸಮನೆ ಗುರ್ ಎನ್ನತೊಡಗಿದರು.
'ನಾವು ಸಾಲಾನೋ ಸೂಲಾನೋ ಮಾಡಿ, ಸಿನಿಮಾ ಮಾಡುತ್ತೇವೆ. ಅದಕ್ಕೆ ತಕ್ಕಂತೆ ನಿರ್ದೇಶಕರು ಸರಿಯಾಗಿ ಕೆಲಸ ಮಾಡಬೇಕು. ಏನೇನೋ ಹೊಸ ಪ್ರಯೋಗ ಮಾಡಬಾರದು. ಕೈಲಾದ ಮಟ್ಟಿಗೆ ಬಜೆಟ್ ಬಗ್ಗೆ ಚಿಂತಿಸಬೇಕು. ಮಾಡುವುದನ್ನು ಕಾಯಕಲ್ಪದಲ್ಲಿ ಮಾಡಿ ತೋರಿಸಬೇಕು' ಎಂದು ನಿರ್ದೇಶಕರಿಗೆ ಕ್ಲಾಸ್ ತಗೊಂಡರು.
ನಂತರ ಅವರ ಪಿತ್ತ ಹೆಚ್ಚು ಸಂಭಾವನೆ ಕೇಳುವ ನಿರ್ದೇಶಕರತ್ತ ಏರಿತು. ಮೊನ್ನೆ ತನಕ ದಿನಕ್ಕೆ ಮೂರಂಕಿ ಸಂಭಾವನೆ ಕೇಳುತ್ತಿದ್ದ ಕಲಾವಿದರು ಈಗ ಏಕಾಏಕಿ ಆರಂಕಿ ದಾಟಿದ್ದಾರೆ. ಮಾತ್ತೆತ್ತಿದ್ದರೆ ಲಕ್ಷ ಕೊಡ್ಬೇಕು ಅಂತಾರೆ. ನಾವೇನು ದುಡ್ಡಿನ ಗಿಡ ನೆಟ್ಟಿದೇವಾ? ಅಥವಾ ಪ್ರಿಂಟಿಂಗ್ ಮೆಷಿನ್ ಇಟ್ಟಿದ್ದೀವಾ ಎಂದು ತರಾಟೆಗೆ ತಗೊಂಡ ಮಂಜು ಈ ವರ್ಷ ಇಂಡಸ್ಟ್ರೀಯಲ್ಲಿ ನಿರ್ಮಾಪಕರಿಗೆ 350 ಕೋಟಿ ರೂ. ನಷ್ಟವಾಗಿದೆ ಎಂದರು.