ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಮಾತುಕತೆ'ಯತ್ತ ಹೊರಳಿದ ಕೌಶಿಕ್
ಸುದ್ದಿ/ಗಾಸಿಪ್
Feedback Print Bookmark and Share
 
'ನಮ್ ಏರಿಯಾದಲ್ ಒಂದು ದಿನ' ಚಿತ್ರ ಬಿಡುಗಡೆಗೆ ಮೊದಲೇ ಅದರ ನಿರ್ದೇಶಕ ಅರವಿಂದ್ ಕೌಶಿಕ್ ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಶೂಟಿಂಗ್ ಕೂಡಾ ಆರಂಭವಾಗಿದೆ. ಚಿತ್ರದ ಹೆಸರು 'ಮಾತುಕತೆ'.

'ನಮ್ ಏರಿಯಾಲ್ ಒಂದು ದಿನ'ದ ನಾಯಕಿ ಮೇಘನಾ ಈ ಚಿತ್ರದಲ್ಲೂ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ರವಿತೇಜ ಇದರ ನಾಯಕ. ಇವರು ಕೌಶಿಕ್ ಹಿಂದಿನ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಮಾತುಕತೆ ರಸ್ತೆಯಲ್ಲಿ ನಡೆಯುವ ಕಥೆಯಂತೆ. ಇದೊಂದು ಲವ್ ಸಬ್ಜೆಕ್ಟ್. ನಾಯಕ-ನಾಯಕಿ ರಸ್ತೆಯಲ್ಲಿ ಭೇಟಿ ಆಗುತ್ತಾರೆ. ನಂತರ ಅಲ್ಲೇ ಲವ್ ಕೂಡಾ ಮಾಡುತ್ತಾರೆ. ಹಾಗೆ ಮಾತುಕತೆ ನಡೆಸುತ್ತಾರೆ. ಶೇ.70 ರಷ್ಟು ಕರಾವಳಿ ಪ್ರದೇಶದಲ್ಲಿ ಶೂಟಿಂಗ್ ನಡೆಯಲಿದೆ. ಮಾತುಕತೆ ಯಶಸ್ವಿಯಾಗುತ್ತದೋ ಅಥವಾ ಮುರಿದು ಬೀಳುತ್ತದೋ ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಮ್ ಏರಿಯಾಲ್ ಒಂದು ದಿನ, ಅರವಿಂದ್ ಕೌಶಿಕ್ ಮಾತುಕತೆ, ಮೇಘನಾ, ರವಿತೇಜ