ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಭಾಗ್ಯದ ಬಳೆಗಾರ
ಸುದ್ದಿ/ಗಾಸಿಪ್
Feedback Print Bookmark and Share
 
ಆತ ಪ್ರತಿ ಮನೆಮನೆಗೆ ಹೋಗಿ ಬಳೆ ತೋಡಿಸುತ್ತಾನೆ. ಪ್ರತಿಯೊಬ್ಬರ ಕಷ್ಟಸುಖ ವಿಚಾರಿಸುತ್ತಾನೆ. ನಗು ನಗುತ್ತಾ ಮಾತನಾಡುತ್ತಾನೆ. ಎಲ್ಲರೂ ಆತನಿಗೆ ತಾಯಿ, ತಂಗಿ ಸಮಾನ. ಕೈ ತುಂಬಾ ಬಳೆ ತೋಡಿಸಿ ಆನಂದ ಪಡುತ್ತಾನೆ. ಆದರೆ ಆತನ ವೈಯಕ್ತಿಕ ಬದುಕು ಹೇಗಿರುತ್ತೆ, ಅಲ್ಲಿ ಬರುವ ಸಂಕಷ್ಟಗಳನ್ನು ಹೇಗೆ ಎದುರಿಸುತ್ತಾನೆ ಎನ್ನುವುದು ಭಾಗ್ಯದ ಬಳೆಗಾರ ಚಿತ್ರದ ಒನ್‌‌ಲೈನ್ ಸ್ಟೋರಿ.

ಅಜಯ್ ಕುಮಾರ್ ಬರೆದಿರುವ ಈ ಕಥೆಯನ್ನು ಸಾಯಿಪ್ರಕಾಶ್ ಸಿನಿಮಾ ಮಾಡಲು ಹೊರಟ್ಟಿದ್ದಾರೆ. ಚಿತ್ರದಲ್ಲಿ ಒಟ್ಟು ಎಂಟು ಹಾಡುಗಳಿವೆ. ಅದರಲ್ಲಿ ಏಳು ಮುಗಿದಿದೆ. ಎರಡು ಜನಪದ ಶೈಲಿಯಲ್ಲಿವೆ. ಎಲ್ಲವೂ ಹಳ್ಳಿ ಸೊಗಡಿನ ಹಿನ್ನೆಲೆಯಲ್ಲೆ ನಡೆಯುತ್ತದೆ.
MOKSHA
ಚಿತ್ರಕ್ಕೆ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ಹಳ್ಳಿ ಭಾಷೆಗೆ ಶಿವಣ್ಣ ಖಂಡಿತಾ ಹೊಂದಿಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆ ಮಾತುಕತೆ ಇರುತ್ತೆ ಎನ್ನುವುದು ಮಳವಳ್ಳಿ ಅಭಿಪ್ರಾಯ. ಜೋಗಿಯ ಸಿ.ಆರ್.ಸೀನು ಛಾಯಾಗ್ರಹಣವಿದೆ.

ಮೈಸೂರು, ಚಾಮರಾಜನಗರ, ಕೊಳ್ಳೆಗಾಲ, ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ನಾಯಕಿ ಪಾತ್ರಕ್ಕೆ ಪ್ರಿಯಾಮಣಿಯನ್ನು ಮಾತನಾಡಿದಾಗ ಓಕೆ ಅಂದಳಂತೆ. ಆದರೆ ಮಣಿರತ್ನಂ ಚಿತ್ರದಲ್ಲಿ ಅವಕಾಶ ಸಿಕ್ಕಿತ್ತೆಂದು ಕೈ ಎತ್ತಿ ಹೋದಳಂತೆ. ಇದರಿಂದ ಚಿತ್ರಕ್ಕೆ ನಾಯಕಿ ಇನ್ನೂ ಸಿಕ್ಕಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಾಗ್ಯದ ಬಳೆಗಾರ, ಅಜಯ್ ಕುಮಾರ್, ಮಣಿರತ್ನಂ