ಅಂದಹಾಗೆ ನಮ್ಮ ನೀತು ಎಂಎ ಪದವಿಯಲ್ಲಿ ಫಸ್ಟ್ ಕ್ಲಾಸ್ ದರ್ಜೆಯಲ್ಲಿ ಪಾಸಾಗಿದ್ದಾರೆ. ಅಲ್ಲಿಗೆ ಅವರೀಗ ಎಂ.ಎ ಮೊದಲ ವರ್ಷ ಪೂರೈಸಿದಂತಾಗಿದೆ. ಅವರು ನಾಯಕಿಯಾಗಿ ನಟಿಸುತ್ತಿರುವ 'ಕೃಷ್ಣ ನೀ ಲೇಟಾಗಿ ಬಾರೋ' ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ.
MOKSHA
ಚಿತ್ರ ತಂಡ ಮುಂದಿನ ಶೆಡ್ಯೂಲ್‌ಗಾಗಿ ಮೊದಲ ವಾರದಲ್ಲಿ ಕೇರಳಕ್ಕೆ ಪ್ರಯಾಣ ಬೆಳೆಸಲಿದೆ. ಅಲ್ಲಿಯವರೆಗೆ ಚಿತ್ರದ ನಾಯಕಿ ನೀತುಗೆ ಸ್ವಲ್ಪ ಬಿಡುವು. ಈ ಮಧ್ಯೆ ನೀತು ಹೊಸ ಚಿತ್ರವೊಂದರ ಕುರಿತು ಮಾತುಕತೆ ನಡೆಸುತ್ತಿದ್ದಾರೆ.
ಕೃಷ್ಣ ನೀ ಲೇಟಾಗಿ ಬಾರೋ ಸಂಪೂರ್ಣ ಹಾಸ್ಯಮಯ ಚಿತ್ರ. ಹಾಸ್ಯ ಚಿತ್ರಗಳಲ್ಲಿ ಪ್ರೇಕ್ಷಕರು ನನ್ನನ್ನು ಇಷ್ಟಪಡುತ್ತಾರೆ. ಜಾಕ್‌ಪಾಟ್ ಹಾಗೂ ಗಾಳಿಪಟದ ಚಿತ್ರಗಳಲ್ಲಿನ ಅಭಿನಯಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಎನ್ನುವ ನೀತು, ನಗಿಸುವುದು ಸುಲಭದ ಕೆಲಸವಲ್ಲ ಎನ್ನುತ್ತಾರೆ. ಇವರು ನಟಿಸಿದ ಉಗ್ರಗಾಮಿ ಚಿತ್ರಕ್ಕೆ ಈಗ ರೀರೆಕಾರ್ಡಿಂಗ್ ನಡೆಯುತ್ತಿದೆ.