'ನಿನಗಾಗಿ ಕಾದಿರುವೆ'

ಶುಕ್ರವಾರ, 21 ನವೆಂಬರ್ 2008( 15:35 IST )
ನಟ ವಿಶಾಲ್ ಹೆಗಡೆ ನಾಯಕರಾಗಿ ನಟಿಸಿರುವ 'ನಿನಗಾಗಿ ಕಾದಿರುವೆ' ಚಿತ್ರಕ್ಕೆ ಡಿಟಿಎಸ್ ನಡೆಯುತ್ತಿದೆ. ಗಂಡ ಹೆಂಡತಿ ಚಿತ್ರದ ಮೂಲಕ ಬೆಲಕಿಗೆ ಬಂದ ವಿಶಾಲ್ ಬ್ರೇಕ್‌ಗಾಗಿ ಕಾಯುತ್ತಿದ್ದಾರೆ.
ಪೂಜಾಗಾಂಧಿಯೊಂದಿಗಿನ ನಿನಗಾಗಿ ಕಾದಿರುವೆ ಚಿತ್ರ ಗಾಂಧಿನಗರದಲ್ಲಿ ಇವರನ್ನು ಗುರುತಿಸುವಂತೆ ಮಾಡಬಹುದು ಎಂದು ಅವರು ನಂಬಿದ್ದಾರೆ. ಸಾಹಸ ನಿರ್ದೇಶಕ ಜಾಲಿಬಾಸ್ಟಿನ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಪ್ರೇಮಕತೆಯಲ್ಲಿ ಸಾಕಷ್ಟು ತಿರುವುಗಳಿವೆಯಂತೆ.
ತಮ್ಮ ಚಿತ್ರವನ್ನು ವಿಶಾಲ್ ಲವ್-ಸಸ್ಪೆನ್ಸ್-ಥ್ರಿಲ್ಲರ್ ವರ್ಗಕ್ಕೆ ಸೇರಿಸುತ್ತಾರೆ. ಈ ಚಿತ್ರ ತಮ್ಮ ಸಿನಿಮಾ ಜೀವನಕ್ಕೆ ತಿರುವು ನೀಡಲಿದೆಯೆಂದು ಅವರು ಭಾವಿಸಿದ್ದಾರೆ. ಜನವರಿ ಯಲ್ಲಿ ಸೆಟ್ಟೇರಲಿರುವ ಚಿತ್ರವೊಂದರಲ್ಲೂ ವಿಶಾಲ್ ನಟಿಸುವ ಸಾಧ್ಯತೆಗಳಿವೆ. ರಿಯಾಲಿಟಿ ಷೋ ನಿರೂಪಿಸುವಂತೆಯೂ ಕರೆ ಬಂದಿದೆಯಂತೆ.