ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸ್ಪೇನ್‌ನಲ್ಲಿ ಮಾಸ್ಟರ್ ಕಿಶನ್
ಸುದ್ದಿ/ಗಾಸಿಪ್
Feedback Print Bookmark and Share
 
ಸ್ಪೇನ್ ರಾಜಧಾನಿ ಮಾಡ್ರಿಡ್‌‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಕ್ಕಳ ಚಿತ್ರೋತ್ಸವದಲ್ಲಿ ಮಾಸ್ಟರ್ ಕಿಶನ್ ತಮ್ಮ ಕೇರ್ ಆಫ್ ಫುಟ್‌‌ಪಾತ್ ಚಿತ್ರದ ಪ್ರದರ್ಶನಕ್ಕಾಗಿ ಅಲ್ಲಿಗೆ ತೆರಳಿದ್ದಾರೆ.

ನ.16ರಂದು ಚಿತ್ರದ ನಿರ್ಮಾಪಕಿ ,ತಾಯಿಯಾದ ಶೈಲಜಾ ಶ್ರೀಕಾಂತ್ ಅವರೊಂದಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಚಿತ್ರೋತ್ಸಕ್ಕೆ ಭಾರತದಿಂದ ಭಾಗವಹಿಸಿದ ಏಕಮಾತ್ರ ಚಿತ್ರ ಇದು ಎಂಬುದು ಗಮನಾರ್ಹ ಅಂಶ.

2006ರಲ್ಲಿ ತೆರೆಕಂಡ ಈ ಚಿತ್ರ ಈ ವರೆಗೆ 12 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಜೊತೆಗೆ ಕಿಶನ್‌‌ಗೆ ಅನೇಕ ಪ್ರಶಸ್ತಿಗಳನ್ನು ತಂದು ಕೊಟ್ಟಿದೆ. ಈ ನಡುವೆ ಮನೋವಿಜ್ಞಾನದ ಬಗೆಗಿನ ಚಿತ್ರ ಮಾಡಲು ಕಿಶನ್ ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದಾರೆ. ಅಂದಹಾಗೆ ಕಿಶನ್ ಈಗ 8ನೇ ತರಗತಿ ವಿದ್ಯಾರ್ಥಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾಸ್ಟರ್ ಕಿಶನ್, ಸ್ಪೇನ್, ಚಿತ್ರೋತ್ಸವ, ಶೈಲಜಾ ಶ್ರೀಕಾಂತ್