ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶತಕದ ಸಂಭ್ರಮದಲ್ಲಿ ಕನ್ನಡ ಚಿತ್ರ
ಸುದ್ದಿ/ಗಾಸಿಪ್
Feedback Print Bookmark and Share
 
ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಇಲ್ಲಿಯವರೆಗೆ ಬಿಡುಗಡೆಯಾದ ಒಟ್ಟು ಚಿತ್ರಗಳ ಸಂಖ್ಯೆ 100. ಶತಕ ಬಾರಿಸಿದ ಸಂಭ್ರಮ ಚಿತ್ರರಂಗಕ್ಕಿದ್ದರೂ ಅದರಲ್ಲಿ ಶೇ 90 ರಷ್ಟು ಚಿತ್ರಗಳು ಮುಗ್ಗರಿಸಿವೆ.

ನೂರು ದಿನಗಳ ಸಂಭ್ರಮದ ಅಂಗವಾಗಿ ಚಿತ್ರರಂಗ ಒಂದು ದಿನ ಬಿಡುವು ಮಾಡಿದೆ. ಅಂದರೆ ಈ ವಾರ ಯಾವುದೇ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಮುಂದಿನ ವಾರ ಎರಡು ದೊಡ್ಡ ಬಜೆಟ್‌‌ನ ಚಿತ್ರಗಳಾದ ಮಸ್ತ್ ಮಜಾ ಮಾಡಿ ಹಾಗೂ ಜನುಮದ ಗೆಳತಿ ಚಿತ್ರಗಳು ತೆರೆಗೆ ಬರಲಿವೆ.

ಹೊಸಬರಿಂದಲೇ ತುಂಬಿ ಹೋಗಿರುವ ಚಿತ್ರರಂಗದಲ್ಲಿ ಉತ್ತಮ ಚಿತ್ರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕೇವಲ ತಾನೊಬ್ಬ ನಿರ್ದೇಶಕ, ಹೀರೋ ಹಾಗೂ ನಿರ್ಮಾಪಕನೆಂದು ಗುರುತಿಸಕೊಳ್ಳಬೇಕೆಂದು ಚಿತ್ರ ಮಾಡುತ್ತಾರೆಯೇ ಹೊರತಾಗಿ ಚಿತ್ರ ಗೆಲ್ಲಬೇಕು ಎಂಬ ನೈಜ ಕಾಳಜಿಯಿಂದ ಚಿತ್ರ ಮಾಡುತ್ತಿಲ್ಲ. ಪರಿಣಾಮ ಸಾಲು ಸಾಲು ಚಿತ್ರಗಳು ಮಕಾಡೆ ಮಲಗುತ್ತಿವೆ.

ಈ ವರ್ಷದ ಚಿತ್ರಗಳನ್ನೇ ತಗೊಂಡರೆ ಗಾಳಿಪಟ, ನಂದ ಲವ್ಸ್ ನಂದಿತಾ, ಮುಸ್ಸಂಜೆ ಮಾತು, ತಾಜ್‌ಮಹಲ್, ಬುದ್ದಿವಂತ ಹಾಗೂ ಅಲ್ಲಿಂದಲ್ಲಿಗೆ ವಂಶಿ. ಉಳಿದ ಹೆಚ್ಚಿನ ಚಿತ್ರಗಳೆಲ್ಲ ಗೋತಾ ಹೊಡೆದಿವೆ. 101ನೇ ಚಿತ್ರಗಳ ನಂತರ ಚಿತ್ರರಂಗ ಯಾವ ರೀತಿ ಪ್ರಗತಿ ಕಾಣುತ್ತದೆ ಎಂದು ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನ್ನಡ, ಮಸ್ತ್ ಮಜಾ ಮಾಡಿ, ಜನುಮದ ಗೆಳತಿ