ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಮ್ ಕಹಾನಿ ಕಥೆಗಳು
ಸುದ್ದಿ/ಗಾಸಿಪ್
Feedback Print Bookmark and Share
 
ಇದೊಂದು ಪಕ್ಕಾ ಲವ್ ಸ್ಟೋರಿ. ಸದಾಶಿವನಗರದ ಹುಡುಗಿ. ಶ್ರೀರಾಂಪುರ ಹುಡುಗ. ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಆ ಪ್ರೀತಿ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ನಾನು ಕಥೆ ಮಾಡುವಾಗ ಕಲ್ಪನೆ ಮಾಡಿಕೊಂಡು ಚಿತ್ರಕಥೆ ಬರೆಯುವುದಿಲ್ಲ. ನನ್ನ ಸುತ್ತಲಿರುವ ಜನರ ಉದಾಹರಣೆಗಳನ್ನು ನೋಡಿ ಬರೆಯುತ್ತೇನೆ. ಹೀಗಾಗಿ ಇದು ರಿಯಾಲಿಸ್ಟಿಕ್ ಸ್ಟೋರಿ. ಪ್ರತಿಯೊಬ್ಬರ ಜೀವನದಲ್ಲೂ ಈ ರೀತಿಯ ಕಥೆಗಳು ಬಂದು ಹೋಗಿರುತ್ತೆ ಎಂದರು ನಿರ್ದೇಶಕ ಚಂದ್ರು.

ತಾಜ್‌ಮಹಲ್ ಚಿತ್ರದ ನಂತರ ಅವರು ಈಗ ಮತ್ತೊಂದು ಚಿತ್ರದ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಅದು ಪ್ರೇಮ್ ಕಹಾನಿ ಎಂಬ ಪಕ್ಕಾ ಲವ್ ಸ್ಟೋರಿ ಚಿತ್ರ. ಚಿತ್ರದಲ್ಲಿ ಅಜಯ್ ನಾಯಕರಾಗಿ ನಟಿಸುತ್ತಿದ್ದಾರೆ. ಎಲ್ಲೋ ಇದ್ದ ಅಜಯ್ ಈಗ ಚಿತ್ರರಂಗದಲ್ಲಿದ್ದಾನೆ ಎಂದರೆ ಅದಕ್ಕೆ ಕಾರಣ ತಾಜ್‌ಮಹಲ್. ಹೊಸ ಚಿತ್ರದಲ್ಲಿ ಸ್ಲಂ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದರು ಅಜಯ್.

ತೆಲುಗು ಚಿತ್ರರಂಗದಲ್ಲಿ ಈಗಷ್ಟೇ ಹೆಸರು ಮಾಡುತ್ತಿರುವ ನಟಿ ಶೀಲಾ ಈ ಚಿತ್ರದ ನಾಯಕಿ. ಚಿಕ್ಕಂದಿನಿಂದಲೂ ಸ್ಟೇಜ್ ಷೋಗಳಲ್ಲಿ ಕುಣಿದು ಅಭಿನಯಿಸಿದ್ದೆ. ಈಗ ಕನ್ನಡದಲ್ಲಿ ಅವಕಾಶ ಸಿಕ್ಕಿದೆ. ಇಲ್ಲಿ ಗ್ಲ್ಯಾಮರ್ ಹುಡುಗಿ ಪಾತ್ರ. ನನಗೆ ಇದು ಚೆನ್ನಾಗಿ ಸೂಟ್ ಆಗುತ್ತದೆ ಎಂದರು ಶೀಲಾ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಜಯ್, ಪ್ರೇಮ್ ಕಹಾನಿ, ಶೀಲಾ