ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಯೋಗಿ ಮಹಿಮೆ
ಸುದ್ದಿ/ಗಾಸಿಪ್
Feedback Print Bookmark and Share
 
ಲೂಸ್ ಮಾದ ಯೋಗೀಶ್‌ಗೆ ಆಫರ್‌ಗಳ ಸುರಿಮಳೆ. ಸದ್ಯ ಇವರು ಯೋಗಿ ಚಿತ್ರದಲ್ಲಿ ತೊಡಗಿದ್ದಾರೆ. ಬರೀ ಸ್ಲಂ ಬಾಲನಾಗಿ ಕಾಣಿಸಿಕೊಂಡಿದ್ದ ಯೋಗೇಶ್ ಈಗ ಲವರ್ ಬಾಯ್ ಆಗಿ ಬದಲಾಗಿದ್ದಾರೆ.

ಈ ಚಿತ್ರದಲ್ಲಿ ಶಿರಿನ್ ಅಕ್ಕನ ಪಾತ್ರ ಮಾಡುತ್ತಿದ್ದಾರೆ. ಡ್ಯೂಪ್ ಬಳಸದೇ ಹೊಡೆದಾಟಗಳನ್ನು ಮಾಡಿದ್ದೇನೆ. 45 ಅಡಿಯಿಂದ ಜಂಪ್ ಮಾಡಿದೆ. ಸಣ್ಣಪುಟ್ಟ ಗಾಯಗಳಾದರೂ ದೃಶ್ಯ ಅಂದುಕೊಂಡಂತೆ ಮೂಡಿಬಂದಿದೆ ಎನ್ನುವುದು ಖುಷಿ ತಂದಿದೆ ಎಂದು ಯೋಗಿ ತಮ್ಮ ಚಿತ್ರದ ಬಗ್ಗೆ ಮಾತನಾಡಿದರು.

ಬಾರ್‌ನಲ್ಲಿ ಕೆಲಸ ಮಾಡುವ ಒಬ್ಬ ಮಾಮೂಲಿ ಹುಡುಗನ ಕಥೆಯನ್ನು ಯೋಗಿ ಹೊಂದಿದೆ. ಹೈದರಾಬಾದ್, ಗೋವಾ ಮುಂತಾದೆಡೆ ಚಿತ್ರೀಕರಣ ಮಾಡಿದ್ದೇವೆ ಎಂದರು ನಿರ್ದೇಶಕ ಪ್ರಕಾಶ್.

ನನ್ನ ಕಲ್ಪನೆಗೂ ಮೀರಿ ಯೋಗಿ ಕುಣಿದಿದ್ದಾರೆ. ಅವರಿಗೆ ಎನರ್ಜಿ ಸ್ಟಿಕ್ ಯೋಗಿ ಎಂದು ಹೆಸರಿಟ್ಟಿದ್ದೇನೆ. ಹಾಡುಗಳು ಸಂದರ್ಭಕ್ಕೆ ತಕ್ಕಂತೆ ಇವೆ. ನೃತ್ಯ ಸಂಯೋಜನೆಯಲ್ಲಿ ಗ್ಲಾಮರ್ ಎದ್ದು ಕಾಣುತ್ತದೆ ಎಂದು ನೃತ್ಯ ಸಂಯೋಜಕ ಇಮ್ರಾನ್ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲೂಸ್ ಮಾದ, ಯೋಗಿ, ಮಹಿಮೆ