ಮಹರ್ಷಿಯ ಪಿತ್ತ

ಬೆಂಗಳೂರು, ಶನಿವಾರ, 22 ನವೆಂಬರ್ 2008( 18:39 IST )
ಕಳೆದ ವಾರ ಬಿಡುಗಡೆಯಾಗಿ ನೆಲಕಚ್ಚಿದ ಮಹರ್ಷಿ ಚಿತ್ರದ ನಿರ್ಮಾಪಕ ಪ್ರವೀಣ್ ಕುಮಾರ್ ಪತ್ರಕರ್ತರ ಮೇಲೆ ರೇಗಾಡುತ್ತಿದ್ದರು. ಪತ್ರಕರ್ತರು ಚಿತ್ರದ ಬಗ್ಗೆ ನೆಗೆಟಿವ್ ಅಭಿಪ್ರಾಯ ಬರೆದಿದ್ದರು.
ಆದರೆ ನಿರ್ಮಾಪಕರು ಮಾತ್ರ, ಮಹರ್ಷಿ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಫೈಟಿಂಗ್ ದೃಶ್ಯ ನೋಡಲು ಜನ ನೂಕುನುಗ್ಗಲಿನಿಂದ ಬರುತ್ತಿದ್ದಾರೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು. ಪತ್ರಕರ್ತರಿಗೆ ಪರೋಕ್ಷವಾಗಿ ಎಚ್ಚರಿಕೆಯನ್ನೂ ಕೊಟ್ಟರು.
ಸಿನಿಮಾ ವಿಮರ್ಶೆ ಬರೀ ಬುರುಡೆಯಂತೆ. ಅದೇ ರೀತಿ ಬರೆಯುವುದಾದರೆ ಇನ್ನು ಮುಂದೆ ಸಿನಿಮಾವನ್ನೇ ತೋರಿಸುವುದಿಲ್ಲವಂತೆ. ಇಡೀ ಸಿನಿಮಾವನ್ನು ಡಬ್ಬ ಥರ ಇದೆ ಎಂದರೆ ನಾವು ಹಾಕಿದ ಬಂಡವಾಳದ ಕತೆ ಏನಾಗಬೇಕು. ಇನ್ನು ಮುಂದೆ ಸಿನಿಮಾ ನೋಡಲು ಬರಬೇಡಿ ಎಂದು ಧಮಕಿ ಹಾಕಿದರು.
ಈ ರೀತಿ ಪತ್ರಕರ್ತರ ಮೇಲೆ ರೇಗಾಡುವುದಕ್ಕಿಂತ ಮಾಡುವಾಗಲೇ ಉತ್ತಮ ಸಿನಿಮಾ ಮಾಡಬಹುದಲ್ಲ.