ಬಿರಾದಾರ್‌ಗೆ ಪ್ರಮುಖ ಪಾತ್ರ

ಬೆಂಗಳೂರು, ಶನಿವಾರ, 22 ನವೆಂಬರ್ 2008( 18:41 IST )
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಪಾತ್ರಗಳ ಮೂಲಕ ಗಮನ ಸೆಳೆದ ಬಿರಾದಾರ್‌ಗೆ ಚಿತ್ರವೊಂದರಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಅವಕಾಶ ಸಿಕ್ಕಿದೆ. ಅದು ಕೂಡಾ ಗೀರೀಶ್ ಕಾಸರವಳ್ಳಿ ಚಿತ್ರದಲ್ಲಿ ನಟಿಸುವ ಅವಕಾಶ.
ಕಾಸರವಳ್ಳಿ ಅವರು ಯಶವಂತ ಚಿತ್ತಾಲರ ಸಿದ್ದಾರ್ಥ ಕತೆಯನ್ನು ಚಿತ್ರ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗುತ್ತಿಲ್ಲ. ಇದೀಗ ಅಮರೇಶ್ ನುಗುಡೋಣಿ ಅವರ ಕತೆಯಾಧರಿಸಿದ ಚಿತ್ರವನ್ನು ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಕಥೆ ಸಿದ್ಧವಾಗಿದೆ.
ತಾರಾಗಣದಲ್ಲಿ ಉಮಾಶ್ರೀ, ಪವಿತ್ರಾ ಲೋಕೇಶ್ ಸೇರಿದಂತೆ ಇತರರಿದ್ದಾರೆ. ಈ ಹಿಂದೆ ದ್ವೀಪ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ಎಚ್.ಎಂ.ರಾಮಚಂದ್ರ ಅವರೇ ಈ ಚಿತ್ರಕ್ಕೂ ಛಾಯಾಗ್ರಾಹಕರು. ಚಿತ್ರವನ್ನು ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ನಿರ್ಮಿಸುತ್ತಿದ್ದು, ಡಿಸೆಂಬರ್ 20 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.