ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವರ ಫಿನಿಶ್
ಸುದ್ದಿ/ಗಾಸಿಪ್
Feedback Print Bookmark and Share
 
ಸಿದ್ದಾಂತ್ ಮತ್ತು ನಿಧಿ ಅಭಿನಯದ ವರ ಚಿತ್ರೀಕರಣ ಮುಗಿದಿದೆ. ಚಿತ್ರಕ್ಕೀಗ ರೀರೆಕಾರ್ಡಿಂಗ್ ನಡೆಯುತ್ತಿದೆ. ಹಳ್ಳಿಯಿಂದ ನಗರಕ್ಕೆ ಬರುವ ಯುವಕ-ಯುವತಿ ತಮಗೇ ಅರಿವಿಲ್ಲದಂತೆ ಭೂಗತ ಜಗತ್ತಿನ ಸುಳಿಗೆ ಸಿಲುಕುತ್ತಾರೆ. ಇದರಿಂದ ಯಾವ ರೀತಿ ಪಾರಾಗುತ್ತಾರೆ ಎಂಬುದು ಚಿತ್ರದ ಕತೆ.

ಸ್ಟಿಲ್ ಕ್ಯಾಮರಾ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೆ.ಆರ್.ಚಂದ್ರಶೇಖರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರ ನಿರ್ದೇಶಿಸಿದ್ದಾರೆ. ಅವರಿಗಿದು ಎರಡನೇ ಚಿತ್ರ. ಈ ಹಿಂದೆ ಅವರು ನಿರ್ದೇಶಿಸಿದ ನಂ.18 ಕಲ್ಪನಾ ಹೌಸ್ ತೆರೆ ಕಾಣಬೇಕಿದೆ.

ಜಯಂತ್ ಕಾಯ್ಕಿಣಿ ಮತ್ತು ನಾಗೇಂದ್ರ ಪ್ರಸಾದ್ ಬರೆದಿರುವ ಐದು ಹಾಡುಗಳಿಗೆ ಆಶ್ಲೇ ಮತ್ತು ಅನಚಿತ್ ಸಂಗೀತ ಸಂಯೋಜಿಸಿದ್ದಾರೆ. ಅನಂತ್‌ನಾಗ್, ದೀಲೀಪ್‌ರಾಜ್, ಸುಧಾ ಬೆಳವಾಡಿ, ಟಿನ್ನಿಸ್ ಕೃಷ್ಣ ಹಾಗೂ ಇತರರು ತಾರಾ ಬಳಗದಲ್ಲಿದ್ದು, ಅವಿನಾಶ್ ಚಿತ್ರದಲ್ಲಿ ವಿಶಿಷ್ಟ ಪಾತ್ರ ವಹಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವರ, ಸಿದ್ದಾಂತ್, ನಿಧಿ