ನಟ ರಮೇಶ್ ಅರವಿಂದ್ ಕನ್ನಡ ಚಿತ್ರರಂಗದಲ್ಲಿ ವಿವಾದ ರಹಿತ ನಟ. ಅವರ ಚಿತ್ರಗಳು ಕೂಡಾ ಜನರಿಗೆ ಬೋರ್ ಹಿಡಿಸುವುದಿಲ್ಲ. ನಿರ್ದೇಶಕರಾಗಿ ಅವರಿಗೆ ನಿರ್ದೇಶಿಸಿದ ಚಿತ್ರಗಳು ಕೂಡಾ ಯಶಸ್ಸು ಕಂಡಿವೆ. ಈಗ ಮತ್ತೊಂದು ಹಾಸ್ಯ ಪ್ರಧಾನ ಚಿತ್ರ ನಿರ್ದೇಶಿಸುವಲ್ಲಿ ರಮೇಶ್ ಬ್ಯುಸಿಯಾಗಿದ್ದಾರೆ.
ಇವರ ನಿರ್ದೇಶನದ ಹಾಸ್ಯ ಚಿತ್ರ ವೆಂಕಟ ಇನ್ ಸಂಕಟಕ್ಕೆ ಭರದಿಂದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ರಜನೀಕಾಂತ್ ಒಬ್ಬ ಇದ್ದಾನೆ. ಆತ ಆಶಾ ಎಂಬ ಹುಡುಗಿಗೆ ಲವ್ ಯೂ ಹೇಳುತ್ತಾನೆ. ಇದರಿಂದ ಕೋಪಗೊಂಡ ಆಕೆ ತಟ್ಟೆಯಲ್ಲಿನ ನೂಡಲ್ಸ್ ತೆಗೆದು ಅವನ ಮೇಲೆ ಸುರಿಯುತ್ತಾನೆ. ಇತ್ತೀಚೆಗೆ ಈ ದೃಶ್ಯವನ್ನು ವೆಂಕಟಪ್ಪ ಕಾಲೇಜ್ ಕ್ಯಾಂಟೀನ್‌ನಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.
ಸಿನಿಮಾ ಹೌಸ್ ಲಾಂಛನದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ರಿಕಿ ಕೇಜ್ ಸಂಗೀತ, ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ನಂದ ಸಂಭಾಷಣೆ ಚಿತ್ರಕ್ಕಿದೆ. ರಮೇಶ್ ಅರವಿಂದ್ ವೆಂಕಟನಾಗಿದ್ದಾರೆ. ಶರ್ಮಿಳಾ ಮಾಂಡ್ರೆ, ಮೇಘನಾ, ಉಮೇಶ್, ಮುಖ್ಯಮಂತ್ರಿ ಚಂದ್ರು, ದೇವದಾಸ್ ಕಾಪಿಕಾಡ್ ಚಿತ್ರದಲ್ಲಿದ್ದಾರೆ.
ಕಳೆದ ಬಾರಿ ಸಸ್ಪೆನ್ಸ್ ಥ್ರಿಲ್ಲರ್ ಆಕ್ಸಿಡೆಂಟ್ ಚಿತ್ರ ನಿರ್ದೇಶಿಸಿದ್ದರು. ಆದರೆ ಅದು ನಿರೀಕ್ಷಿತ ಮಟ್ಟದಲ್ಲಿ ಯಶಗಳಿಸಿರಲಿಲ್ಲ.