ಕೊನೆಗೂ ಎಂ.ಪಿ.ಪ್ರಕಾಶ್‌ಗೆ ಮುಖ್ಯಮಂತ್ರಿ ಭಾಗ್ಯ ಸಿಕ್ಕಿದೆ. ಸದ್ಯದಲ್ಲೇ ಅವರು ಮುಖ್ಯಮಂತ್ರಿಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಿದ್ದಾರೆ. ಆಶ್ವರ್ಯವಾಯಿತೇ? ಚುನಾವಣೆಯಲ್ಲಿ ಸೋಲನುಭವಿಸಿದ ಪ್ರಕಾಶ್ ಮತ್ತೆ ಹೇಗೆ ಮುಖ್ಯಮಂತ್ರಿಯಾಗಲು ಸಾಧ್ಯ ಎಂದು ಹುಬ್ಬೇರಿಸಬೇಡಿ. ಅವರು ಮುಖ್ಯಮಂತ್ರಿಯಾಗಿದ್ದು ರಿಯಲ್ ಆಗಿ ಬಲ್ಲ, ರೀಲ್‌ನಲ್ಲಿ.
ಆನಂದ್ ಆಡಿಯೋ ಮೋಹನ್ ನಿರ್ಮಿಸುತ್ತಿರುವ ಪರಿಣಿತ ಎಂಬ ಎಂಬ ಧಾರಾವಾಹಿಯಲ್ಲಿ ಎಂ.ಪಿ. ಪ್ರಕಾಶ್ ಮುಖ್ಯಮಂತ್ರಿ ಪಾತ್ರ ಮಾಡುತ್ತಿದ್ದಾರೆ. ಟಿ.ಎನ್.ಸೀತಾರಾಂ ಅವರ ಗರಡಿಯಲ್ಲಿ ಪಳಗಿದ ಪಲ್ಲವಿ ಎಂಬವರು ಇದರ ನಿರ್ದೇಶಕರು. ಮನ್ವಂತರ ಧಾರಾವಾಹಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ.
ಅಂದುಕೊಂಡಂತೆ ಎಲ್ಲ ಸಾಗಿದರೆ ಮುಂದಿನ ತಿಂಗಳು ಪ್ರತಿ ರಾತ್ರಿ ಪರಿಣಿತ ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾಳೆ. ಜೀ ಟಿವಿಯಲ್ಲಿ ಇದನ್ನು ಪ್ರಸಾರ ಮಾಡಲು ಸಿದ್ಧತೆಗಳು ನಡೆಯುತ್ತಿದೆ. ರಾಜಕೀಯದಲ್ಲಿ ಮೂಲೆಗುಂಪಾಗುತ್ತಿರುವ ಪ್ರಕಾಶ್ ಈಗ ಕ್ರಮೇಣ ಕಿರುತೆರೆಯತ್ತ ವಾಲುತ್ತಿದ್ದಾರೆ.