ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಮ್-ರಮ್ಯ ಅಭಿನಯದ 'ಜೊತೆಗಾರ'
ಸುದ್ದಿ/ಗಾಸಿಪ್
Feedback Print Bookmark and Share
 
ಪ್ರೇಮ್ ಮತ್ತು ರಮ್ಯ ಅಭಿನಯನದ ಜೊತೆಗಾರ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ದಿನಕರ್ ತೂಗುದೀಪ್ ನಿರ್ದೇಶನದ 'ಜೊತೆ ಜೊತೆಯಲಿ' ಚಿತ್ರದಲ್ಲಿ ಈ ಜೋಡಿ ಯಶಸ್ಸು ಕಂಡಿತ್ತು. ಆ ಯಶಸ್ಸಿನ ನಂತರ ನಟ ಪ್ರೇಮ್‌ರ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲೇ ಇಲ್ಲ. ಪ್ರೇಮ್ ಕೂಡಾ ಬ್ರೇಕ್ ನಿರೀಕ್ಷೆಯಲ್ಲಿ ಜೊತೆಗಾರ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಜೊತೆಗಾರ ಚಿತ್ರ ತಮ್ಮ ಕೈ ಹಿಡಿಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ಪ್ರೇಮ್.

'ಜೋಗಿ' ಚಿತ್ರದ ದೊಡ್ಡ ಯಶಸ್ಸಿನೊಂದಿಗೆ ಅಶ್ವಿನಿ ರಾಂ ಪ್ರಸಾದ್ ನಿರ್ಮಿಸಿದ 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರ ಮಕಾಡೆ ಮಲಗಿತ್ತಲ್ಲದೇ ರಾಂ ಪ್ರಸಾದ್‌ಗೆ ದೊಡ್ಡ ಮಟ್ಟದಲ್ಲೇ ನಷ್ಟ ಉಂಟಾಯಿತು. ನಿರ್ದೇಶಕ ಪ್ರೇಮ್ ಸ್ವತಃ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರು. ಆದರೆ ಜನ ಪ್ರೇಮ್‌ರನ್ನು ನಾಯಕ ಸ್ಥಾನದಲ್ಲಿ ಒಪ್ಪಲಿಲ್ಲ. ಆ ನಂತರ ಪ್ರೇಮ್ ಹಾಗೂ ಅಶ್ವಿನಿ ರಾಂ ಪ್ರಸಾದ್ ನಡುವೆ ಸಣ್ಣದೊಂದು ಮನಸ್ತಾಪ ಉಂಟಾಯಿತು.
MOKSHENDRA
ಈಗವರು ಜೊತೆಗಾರ ಚಿತ್ರ ತಮ್ಮ ಹಿಂದಿನ ಸೋಲನ್ನು ಮರೆಮಾಚುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ಅದಕ್ಕಾಗಿ ಈ ಚಿತ್ರಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ.

ಹಾಡಿಗಾಗಿ ಬ್ಯಾಂಕಾಕ್‌ಗೂ ಹೋಗಿ ಬಂದಿದ್ದಾರೆ. ಇದೀಗ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಸಿಂಗಮಣಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರೇಮ್, ರಮ್ಯ, ದಿನಕರ್ ತೂಗುದೀಪ್, ಜೊತೆ ಜೊತೆಯಲಿ, ಅಶ್ವಿನಿ ರಾಂ ಪ್ರಸಾದ್