'ಆ ದಿನಗಳು' ಚಿತ್ರದ ಮೂಲಕ ಬೆಳಕಿಗೆ ಬಂದ ಸತ್ಯ 'ಗುಂಡ್ರಗೋವಿ' ಚಿತ್ರದ ಮೂಲಕ ನಾಯಕರಾಗುತ್ತಿದ್ದಾರೆ. ರಂಗಭೂಮಿ ಹಿನ್ನೆಲೆಯ ಈ ಹುಡುಗ ಚೊಚ್ಚಲ ಚಿತ್ರದಲ್ಲೇ ಮಿಂಚಿದ್ದರು. ಅದೇ ಬ್ಯಾನರಿನಡಿ ಬಂದ 'ಸ್ಲಂ ಬಾಲ'ದಲ್ಲೂ ಇವರ ಪಾತ್ರವನ್ನು ಎಲ್ಲರೂ ಮೆಚ್ಚಿದ್ದರು. ಇಲ್ಲಿ ಅವರ ಸಹಜ ಅಭಿನಯವನ್ನು ವಿಮರ್ಶಕರು ಕೊಂಡಾಡಿದ್ದರು.
ಸದ್ಯ ಅವರ 'ಗುಂಡ್ರಗೋವಿ' ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಇದೀಗ ಹಾಡುಗಳ ಚಿತ್ರೀಕರಣ ನಡೆಸಲಾಗುತ್ತಿದ್ದು, ಸಕಲೇಶಪುರ, ಚಿಕ್ಕಮಗಳೂರು, ಕಳಸ, ಹೊರನಾಡು ಮತ್ತಿತರೆಡೆ ಚಿತ್ರಿಸಲಾಗುತ್ತಿದೆ. ತಾರೇಶ್ ರಾಜು ಮತ್ತು ಅನಿಲ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಚಿತ್ರದಲ್ಲಿ ನಾಯಕಿಯಾಗಿ ನವ್ಯಶ್ರೀ ನಟಿಸುತ್ತಿದ್ದಾರೆ. ಶರತ್ ಲೋಹಿತಾಶ್ವ ಮತ್ತು ನೀನಾಸಂ ಅಶ್ವತ್ಥ್ಗೆ ಪ್ರಮುಖ ಪಾತ್ರವಿದೆ. ಈ ಚಿತ್ರ ಹಿಟ್ ಆದರೆ ಸತ್ಯನ ಬೇಡಿಕೆಯೂ ಕನ್ನಡದಲ್ಲಿ ಹೆಚ್ಚಲಿದೆ. ಇದೇ ರೀತಿ ಕನ್ನಡದಲ್ಲಿ ಪ್ರತಿಭಾವಂತರಾದ ಅನೇಕ ಕಲಾವಿದರಿದ್ದಾರೆ. ಆದರೆ ಅವರಿಗೆಲ್ಲ ಸೂಕ್ತ ವೇದಿಕೆ ಸಿಕ್ಕಿಲ್ಲ.