ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅನುಪ್ರಭಾಕರ್ ಮತ್ತು ತುಂಡು ಬಟ್ಟೆ...
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ಒಂದು ಕಾಲದಲ್ಲಿ ನಾಯಕಿಯಾಗಿ ಮಿಂಚಿದ್ದ ಅನುಪ್ರಭಾಕರ್‌ಗೆ ಈಗ ಅವಕಾಶಗಳು ಸಿಗುತ್ತಿಲ್ಲ. ಇದನ್ನು ಸ್ವತಃ ಅವರೇ ಒಪ್ಪಿಕೊಳ್ಳುತ್ತಾರೆ. ಈ ಬಗ್ಗೆ ಅವರು ಹೇಳುವುದಿಷ್ಟು 'ವಾರಕ್ಕೆ ಮೂರು ಚಿತ್ರಗಳು ಬಿಡುಗಡೆಯಾಗುತ್ತಿವೆ. ಸರಾಸರಿ ಮೂರರಿಂದ ನಾಲ್ಕು ನಾಯಕಿಯರು ಹುಟ್ಟಿಕೊಳ್ಳುತ್ತಿದ್ದಾರೆ. ಹೆಚ್ಚಿನವರು ತುಂಡು ಬಟ್ಟೆಯ ನಾಯಕಿಯರು. ಹೊಸ ನಿರ್ಮಾಪಕರು ಅದನ್ನೇ ಬಯಸುತ್ತಾರೆ. ಕತೆ ಮಾಡುವಾಗಲೇ ನಾಯಕಿಯರ ಡ್ರೆಸ್ ಕೋಡ್ ನಿರ್ಧರಿಸುತ್ತಾರೆ. ಅದನ್ನು ಹೇಳಿಕೊಂಡು ನನ್ನ ಬಳಿ ಬರುತ್ತಾರೆ. ನಾನು ನೊ ನೊ ಎಂದು ಕೈ ಮುಗಿಯುತ್ತೇನೆ. ಅವರು ಸೀದಾ ಹೋಗುತ್ತಾರೆ' ಎನ್ನುತ್ತಾರೆ ಅನು.

ಪಾತ್ರ ಸಿಗದಿದ್ದರೂ ಚಿಂತೆಯಿಲ್ಲ. ಹಿರಿಯ ನಟಿ ಜಯಂತಿಯವರ ಸೊಸೆಯಾಗಿ ಎಂಥ ಪಾತ್ರವನ್ನು ಒಪ್ಪಿಕೊಳ್ಳಬೇಕು ಎಂದು ಅವರಿಗೆ ಚೆನ್ನಾಗಿ ಗೊತ್ತಿದೆಯಂತೆ. ಕಳೆದ ವರ್ಷ ಬಿಡುಗಡೆಯಾದ ದಾನಮ್ಮದೇವಿ ಚಿತ್ರದ ನಂತರ ಉತ್ತರ ಕರ್ನಾಟಕದ ಜನ ಅವರನ್ನು ಇಂದಿಗೂ ಪೂಜಿಸುತ್ತಾರಂತೆ.

ಸದ್ಯಕ್ಕೆ ಅನು ಬಿ.ಸುರೇಶ್ ಅವರ ಗುಬ್ಬಚ್ಚಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಂದ ಹಾಗೆ ಇವರು ತಾವೂ ನಟಿಸಿದ್ದ ಮುಸ್ಸಂಜೆ ಮಾತು ಚಿತ್ರವನ್ನು ಇಂದಿಗೂ ನೋಡಿಲ್ಲವಂತೆ. ತಾವು ಇಷ್ಟಪಟ್ಟು ಮಾಡಿದ ಕೆಲವು ದೃಶ್ಯಗಳಿಗೆ ಚಿತ್ರತಂಡ ಕತ್ತರಿ ಹಾಕಿದೆ ಎಂಬುದೇ ಅವರ ಕೋಪ. ಆದರೆ ಈ ಬಗ್ಗೆ ಚಿತ್ರತಂಡ ಹೇಳುವುದೆಂದರೆ, ಅವರಿಗೆ ಇಷ್ಟವಾದ ದೃಶ್ಯಗಳು ಜನರಿಗೆ ಇಷ್ಟವಾಗಬೇಕಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅನುಪ್ರಭಾಕರ್, ಜಯಂತಿ, ದಾನಮ್ಮದೇವಿ, ಗುಬ್ಬಚ್ಚಿ, ಮುಸ್ಸಂಜೆ ಮಾತು