ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶಂಕಾರಾಚಾರ್ಯ 'ಪುಣ್ಯಕೋಟಿ'ಯಾದದ್ದು...
ಸುದ್ದಿ/ಗಾಸಿಪ್
Feedback Print Bookmark and Share
 
ಶರತ್ ಬಾಬು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಶಂಕರಾಚಾರ್ಯ' ಚಿತ್ರದ ಶೀರ್ಷಿಕೆ ಬದಲಾಗಿದೆ. ಇದೀಗ ಚಿತ್ರಕ್ಕೆ 'ಶಂಕರ ಪುಣ್ಯಕೋಟಿ' ಎಂದು ಹೆಸರಿಡಲಾಗಿದೆ. ಉಡುಪಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಸ್ಟುಡಿಯೋದಲ್ಲಿ ಧ್ವನಿ ಮುದ್ರಣ ಕಾರ್ಯ ನಡೆಯುತ್ತಿದೆ.

ಈ ಹಿಂದೆ 'ಕರುನಾಡು' ಚಿತ್ರ ನಿರ್ದೇಶಿಸಿದ್ದ ಜಿ.ಮೂರ್ತಿ 'ಶಂಕರ ಪುಣ್ಯಕೋಟಿ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆರಂಭದಲ್ಲಿ ನಟ ಶ್ರೀಧರ್ ಶಂಕಾರಾಚಾರ್ಯರ ಪಾತ್ರವನ್ನು ನಿರ್ವಹಿಸುವುದೆಂದು ನಿರ್ಧರಿಸಲಾಗಿತ್ತು. ಮಹತ್ವದ ಪಾತ್ರದಲ್ಲಿ ನಟಿಸುವ ಬಗ್ಗೆ ಶ್ರೀಧರ್ ಕೂಡಾ ಆಸಕ್ತರಾಗಿದ್ದರು. ಆದರೆ ಡೇಟ್ಸ್ ಸಮಸ್ಯೆಯಿಂದ ಅವರು ಈ ಪಾತ್ರವನ್ನು ಶರತ್ ಬಾಬುಗೆ ಒಪ್ಪಿಸಿಬಿಟ್ಟರು.

ಈ ಭಕ್ತಿಪ್ರಧಾನ ಚಿತ್ರದಲ್ಲಿ ವಿನಯ ಪ್ರಸಾದ್, ರಮೇಶ್ ಭಟ್ ಸೇರಿದಂತೆ ರಂಗಭೂಮಿಯ ಹತ್ತಾರು ಹಿರಿಯ ಕಲಾವಿದರು ನಟಿಸುತ್ತಿದ್ದಾರೆ. ಕೆ.ಎಚ್.ದಾಸ್ ಛಾಯಾಗ್ರಹಣ, ಪ್ರವೀಣ್ ಗೋಡ್ಕಿಂಡಿ ಸಂಗೀತ, ಬನ್ನಂಜೆ ಗೋವಿಂದಾಚಾರ್ಯ ಅವರ ಸಾಹಿತ್ಯ ಚಿತ್ರಕ್ಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶರತ್ ಬಾಬು, ಶಂಕರ ಪುಣ್ಯಕೋಟಿ, ಶಂಕರಾಚಾರ್ಯ, ಉಡುಪಿ, ವಿನಯ ಪ್ರಸಾದ್, ರಮೇಶ್ ಭಟ್