ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವೀರಪ್ಪನ್ ಹುಟ್ಟೂರಿನಲ್ಲಿ ಪಾಡುಪಟ್ಟ 'ಕೆಂಪ'
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ವೀರಪ್ಪನ್ ಹುಟ್ಟೂರು ಗೋಪಿನಾಥಂನಲ್ಲಿ ಚಿತ್ರೀಕರಣ ಮಾಡುವಾಗ ತುಂಬಾ ಕಷ್ಟವಾಯ್ತು. ಚಿತ್ರತಂಡವನ್ನು ನೋಡುತ್ತಲೇ ಅಲ್ಲಿನ ಜನರು ಕೋಪ ಮಾಡಿಕೊಂಡಿದ್ದರು. ಕ್ಯಾಮೆರಾ ಹೊರತೆಗೆದರೆ ಮನೆಯೊಳಗೆ ಸೇರಿಕೊಂಡು ಬಾಗಿಲ ಹಾಕುತ್ತಿದ್ದರು. ಅವರನ್ನು ಸಮಾಧಾನಪಡಿಸಿ ಚಿತ್ರೀಕರಣ ನಡೆಸಿದ್ದನ್ನೇ ಒಂದು ಸಿನಿಮಾ ಮಾಡಬಹುದು ಎಂದರು 'ಕೆಂಪ' ಚಿತ್ರದ ನಿರ್ದೇಶಕ ಜಗದೀಶ್.

ಎಲ್ಲವೂ ಅಂದಕೊಂಡಂತೆಯೇ ಆಗಿದ್ದರೆ ಚಿತ್ರ ಈಗಾಗಲೇ ಥಿಯೇಟರ್‌ನಲ್ಲಿರಬೇಕಿತ್ತು. ಚಿತ್ರೀಕರಣದ ದಿನಗಳು ಕೂಡಾ ಜಾಸ್ತಿಯಾಗಿವೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡಾ ತೀರಾ ನಿಧಾನವಾಗಿದ್ದರಿಂದ ಬಿಡುಗಡೆ ವಿಳಂಬವಾಗಿದೆ. ಚಿತ್ರದಲ್ಲಿ ಸಹಜತೆ ತರಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ಕಥೆಗೆ ಅಗತ್ಯವಿರುವಷ್ಟು ಮಾತ್ರ ಫೈಟಿಂಗ್ ಬಳಸಿದ್ದೇವೆ ಕ್ಲಾಸ್ ಜನರನ್ನು ತಲುಪುವುದು ನಮ್ಮ ಗುರಿ ಎಂದರು.

'ಕರಿಯ' ಚಿತ್ರ ನಿರ್ಮಿಸಿದ ಆನೇಕಲ್ ಬಾಲರಾಜ್ ನಿರ್ಮಾಣದ ಐದನೆಯ ಚಿತ್ರವಿದು. ಚಿತ್ರದಲ್ಲಿ ಅವರ ಮಗ ಸಂತೋಷ್ ನಾಯಕ. ತನುಷಿಕಾ ಚಿತ್ರದ ನಾಯಕಿ. ಗೋಪಿನಾಥಂನ ಚಿತ್ರೀಕರಣದ ಭಾಗದಲ್ಲಿ ಪ್ರಜ್ಞಾ ನಾಯಕನ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ. ಮಲೆಯಾಳಂನ ಸೆಕ್ಸಿ ತಾರೆ ಶಕೀಲಾಗೆ ನಾಯಕಿಯ ತಾಯಿಯ ಪಾತ್ರ. ಮಾಜಿ ಕಮೀಷನರ್ ರೇವಣ ಸಿದ್ದಯ್ಯ ಚಿತ್ರದಲ್ಲಿ ಕಮೀಷನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗೋಪಿನಾಥಂ, ಜಗದೀಶ್, ಕೆಂಪ, ಸಂತೋಷ್, ತನುಷಿಕಾ