ತೆಲುಗು ಹಾಗೂ ತಮಿಳು ಚಿತ್ರರಂಗದ ಖ್ಯಾತ ತಾರೆ ತ್ರಿಶಾ ಕನ್ನಡಕ್ಕೆ ಬರುತ್ತಿದ್ದಾರೆ. ತೆಲುಗಿನ 'ಅತಡು' ಚಿತ್ರ್ರ ಕನ್ನಡಕ್ಕೆ ಬರುತ್ತಿದೆ. ಈ ಚಿತ್ರವನ್ನು 'ರಸಗುಲ್ಲ' ಚಿತ್ರ ನಿರ್ದೇಶಕ ಗೋವರ್ಧನ್ ನಿರ್ದೇಶಿಸಲಿದ್ದಾರಂತೆ. ತೆಲುಗಿನ 'ಅತಡು' ಚಿತ್ರದಲ್ಲಿ ಮಹೇಶ್ ಬಾಬು ಹಾಗೂ ತ್ರಿಶಾ ನಟಿಸಿದ್ದರು. ಚಿತ್ರ ಕೂಡಾ ಸೂಪರ್ ಹಿಟ್ ಆಗಿತ್ತು.
ತೆಲುಗಿನಲ್ಲಿ ಈ ಚಿತ್ರ ಸುಮಾರು 25 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಆದರೆ ಕನ್ನಡದಲ್ಲಿ ಅಷ್ಟೊಂದು ದೊಡ್ಡ ಬಜೆಟ್‌ನ ಚಿತ್ರ ಮಾಡಲು ಸಾಧ್ಯವಿಲ್ಲ. ಆದರೆ 5 ರಿಂದ 7 ಕೋಟಿ ರೂ.ವರೆಗಿನ ಚಿತ್ರ ನಿರ್ಮಿಸಬಹುದು. ಚಿತ್ರಕ್ಕೆ ಹಣ ಖರ್ಚಾದರೂ ಪರ್ವಾಗಿಲ್ಲ ಪುನೀತ್ ಅಥವಾ ದರ್ಶನ್ ನಾಯಕನಾಗಬೇಕು ಎಂದುಕೊಂಡಿದ್ದೇನೆ. ಇನ್ನು ಅವರ ಡೇಟ್ಸ್ ಹೊಂದಾಣಿಕೆಯಾದರೆ ನಂತರ ತ್ರಿಶಾ ಡೇಟ್ಸ್ ಬಗ್ಗೆ ತಿಳಿಸುತ್ತೇನೆ ಎಂದಿದ್ದಾರೆ ಎಂದು ನಿರ್ದೇಶಕರು ವಿವರಿಸಿದರು.
MOKSHENDRA
ಡೇಟ್ಸ್ ವಿಷಯವಾಗಿ ತ್ರಿಶಾರ ಅಮ್ಮ ಹಾಗೂ ಮ್ಯಾನೇಜರ್‌ರಲ್ಲಿ ಮಾತನಾಡಿದ್ದೇನೆ. ಇದಕ್ಕೆ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ತ್ರಿಶಾಳಿಗೆ ಬೇರೆ ಬೇರೆ ಭಾಷೆಗಳಲ್ಲಿ ಅಭಿಮಾನಿಗಳಿದ್ದಾರೆ. ಕನ್ನಡಕ್ಕೆ ಬಂದರೆ ಅವರ ಅಭಿಮಾನಿಗಳು ಬಂದು ಚಿತ್ರ ನೋಡಬಹುದು ಎಂದು ಗೋರ್ವರ್ಧನ್ ವಿವರಿಸಿದರು. ತೆಲುಗಿನ 'ಅತಡು' ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.