ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಮಾಗಮದಲ್ಲಿ ನ್ಯೂಟನ್ ಥಿಯರಿ
ಸುದ್ದಿ/ಗಾಸಿಪ್
Feedback Print Bookmark and Share
 
ಸಮಾಗಮ ನ್ಯೂಟನ್ ಥಿಯರಿ ಇದ್ದ ಹಾಗೆ. ಪ್ರೀತಿ, ಪ್ರೇಮ ಗುರುತ್ವಾಕರ್ಷಣೆ ಸಿದ್ದಾಂತದ ಮೇಲೆ ನಮ್ಮ ಸಮಾಗಮ ನಿಂತಿದೆ. ಸ್ನೇಹ-ಪ್ರೀತಿ ಇವೆರಡರ ನಡುವಿನ ವ್ಯತ್ಯಾಸವೇನು, ಒಂದು ವಸ್ತುವಿನ ಚಲನೆ ನಿಂತಾಗ ಅದು ತನ್ನ ಶಕ್ತಿಯನ್ನು ಯಾಕೆ ಕಳೆದುಕೊಳ್ಳುತ್ತದೆ. ಅದೇ ರೀತಿ ಎರಡು ಜೀವಗಳು ಹೆಚ್ಚೆಚ್ಚು ಸನಿಹ ಬಂದಾಗ ಸ್ನೇಹ, ಪ್ರೀತಿ ಕಡೆ ತಿರುಗುತ್ತದೆ ಎನ್ನುತ್ತಾ ತಲೆಗೆ ಹುಳ ಬಿಟ್ಟರು 'ಸಮಾಗಮ' ಚಿತ್ರದ ನಿರ್ಮಾಪಕ ಮತ್ತು ಕತೆಗಾರ ಅಂದಾನಿಗೌಡ ಹಾಲಹಳ್ಳಿ.

ವಿಶ್ರಾಂತ್ ಈ ಚಿತ್ರದ ನಾಯಕ. ಹುಟ್ಟೂರು ಮಾಲೂರು. ಅಭಿನಯ ಕಲಿತದ್ದು ಗುರು ದೇಶಪಾಂಡೆ ಅವರ ಸ್ವಾರ್ ಕ್ರಿಯೇಟರ್ಸ್ ಸಂಸ್ಥೆಯಲ್ಲಿ. ಓದಿದ್ದು ಡಿಪ್ಲೊಮಾ. ಕಾಲೇಜು ಹುಡುಗನ ಪಾತ್ರವನ್ನು ಚಿತ್ರದಲ್ಲಿ ಮಾಡುತ್ತಿದ್ದಾರೆ. ಮೂಲತಃ ಕೇರಳದವರಾದ ವಿದ್ಯಾ ಚಿತ್ರದ ನಾಯಕಿ. ಆದರೆ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ. ತಮಿಳು ಚಿತ್ರಗಳಲ್ಲಿ ನಟಿಸಿದ ಅನುಭವವಿದೆ.
MOKSHENDRA
ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಕಸ್ತೂರಿ ಜಗನ್ನಾಥ್ ಹೊತ್ತುಕೊಂಡಿದ್ದಾರೆ. ಇವರು ಮಹೇಶ್ ಸುಖಧರೆ ಅವರ ಶಿಷ್ಯ. ಸಿನಿಮಾ ರಂಗಕ್ಕೆ ಮೊದಲ ಬಾರಿಗೆ ಕಾಲಿಡುತ್ತಿದ್ದಾರೆ.

'ಸಮಾಗಮ' ಬಗ್ಗೆ ಕೇಳಿದರೆ ಇದೊಂದು ಸ್ನೇಹ ಪ್ರೀತಿ ಕತೆ ಅಷ್ಟೇ ಎನ್ನುತ್ತಾರೆ. ನಿರ್ಮಾಪಕ ಗೌಡರು ಸೋಮವಾರ ಪೇಟೆಯ ಕೃಷಿಕರು. ಕಥೆ,ಲೇಖನ ಬರೆಯುವುದು ಇವರ ಹವ್ಯಾಸ.

ಅನುರೂಪ ಸಂಬಂಧಗಳ ಅನಾವರಣ ಎಂಬ ಅಡಿಬರಹವನ್ನು ನೀಡಿದ್ದಾರೆ. ಸುಬ್ರಾಯ ಚೊಕ್ಕಾಡಿ ಅವರು ಸಾಹಿತ್ಯ ಬರೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಮಾಗಮ ವಿಶ್ರಾಂತ್ ವಿದ್ಯಾ ಕಸ್ತೂರಿ ಜಗನ್ನಾಥ್