ಕೊನೆಯ ಹಂತದಲ್ಲಿ 'ಅಂಜದಿರು'

ಗುರುವಾರ, 27 ನವೆಂಬರ್ 2008( 17:42 IST )
ನಿರ್ಮಾಪಕ ಕೃಷ್ಣೇಗೌಡ ನಿರ್ಮಿಸುತ್ತಿರುವ ಅಂಜದಿರು ಚಿತ್ರ ತಮಿಳಿನ 'ಅಂಜಾದೆ' ಚಿತ್ರದ ರೀಮೇಕ್ ಎಂಬ ಅಂಶವನ್ನು ನಿರ್ದೇಶಕ ಜಗನ್ನಾಥ್ ತಳ್ಳಿಹಾಕಿದ್ದಾರೆ. ಚಿತ್ರ ಈಗಾಗಲೇ ಕೊನೆಯ ಹಂತ ತಲುಪಿದೆ. ಎಲ್ಲ ಚಿತ್ರಗಳಲ್ಲಿರುವಂತೆ ಈ ಚಿತ್ರದಲ್ಲೂ ಕೊಲೆ, ಸುಲಿಗೆ ಹಾಗೂ ಫೈಟಿಂಗ್‌ಗಳಿವೆ.
ಚಿತ್ರದಲ್ಲಿ ಅನಾಮಿಕನೊಬ್ಬ ಸಾವೀಗೀಡಾಗಿರುತ್ತಾನೆ. ಇದು ಕೊಲೆ ಇರಬೇಕೆಂಬ ಶಂಕೆ ಪೊಲೀಸರದ್ದು. ಈ ಕುರಿತು ಕಾರ್ಯಾಚರಣೆ ಆರಂಭಿಸಿದ ರವಿಕಾಳೆ, ರಾಜಾರಾಂ ಹಾಗೂ ನಾಯಕ ಪ್ರಶಾಂತ್ ಹೆಚ್ಚಿನ ಮಾಹಿತಿಗಾಗಿ ಸುಂಕದಕಟ್ಟೆಯಲ್ಲಿರುವ ಕೆ.ಪಿ.ಜಿ ಆಸ್ಪತ್ರೆಗೆ ಆಗಮಿಸುತ್ತಾರೆ.
ಇತ್ತೀಚೆಗೆ ಈ ದೃಶ್ಯವನ್ನು ನಿರ್ದೇಶಕ ಜಗನ್ನಾಥ್ ಚಿತ್ರೀಕರಿಸಿಕೊಂಡರು. ಚಿತ್ರೀಕರಣ ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರೂ ಚಿತ್ರೀಕರಣ ಸರಾಗವಾಗಿ ಸಾಗಿತ್ತೆಂದು ನಿರ್ದೇಶಕರು ಹೇಳಿದರು. ಚಿತ್ರದಲ್ಲಿ ಪ್ರಶಾಂತ್, ಶುಭಾಪೂಂಜಾ, ಸುಮನ್ ರಂಗನಾಥ್, ಮುರಳಿಧರ್, ಆದಿಲೋಕೆಶ್, ರವಿಕಾಳೆ, ದ್ವಾರಕೀಶ್, ಕೃಷ್ಣೇಗೌಡ, ಶ್ರೀನಿವಾಸಮೂರ್ತಿ, ಅವಿನಾಶ್, ಮುಖ್ಯಮಂತ್ರಿ ಚಂದ್ರು ಹಾಗೂ ಪದ್ಮಜಾರಾವ್ ನಟಿಸಿದ್ದಾರೆ.