ಅದು 'ಜಾಲಿಡೇಸ್' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮದಲ್ಲಿ ಚಿತ್ರ ನಾಯಕ-ನಾಯಕಿಯಿಂದ ಹಿಡಿದು ಎಲ್ಲ ಕಲಾವಿದರವರೆಗೂ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ಸಾಮಾನ್ಯ.
ಆದರೆ 'ಜಾಲಿಡೇಸ್' ಸಮಾರಂಭ ಮಾತ್ರ ಇದಕ್ಕೆ ತದ್ವಿರುದ್ಧವಾಗಿತ್ತು. ಚಿತ್ರದ ಎಂಟು ಮಂದಿ ಕಲಾವಿದರಾದ ಪ್ರದೀಪ್, ಪ್ರವೀಣ್, ವಿಶ್ವಾಸ್, ರಂಜನ್, ಸ್ಪೂರ್ತಿ, ಖತ್ವಾ, ಕೀರ್ತಿ ಯಾರೊಬ್ಬರು ಕ್ಯಾಮರಾಗಳಿಗೆ ಮುಖ ಕೊಡಲಿಲ್ಲ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.
MOKSHENDRA
ಆದರೆ ತಪ್ಪು ಅವರದಲ್ಲ. ನಿರ್ದೇಶಕ ಎಂ.ಡಿ. ಶ್ರೀಧರ್ ಗೋಷ್ಠಿ ಶುರುವಾಗುವ ಮುನ್ನ 'ಯಾರು ಏನೇ ಕೇಳಲಿ ಸಿನಿಮಾವನ್ನು ನೋಡಿ, ಸಿನಿಮಾದಲ್ಲಿ ನೋಡಿ' ಎಂದಷ್ಟೇ ಹೇಳಬೇಕು ಎಂದು ಹುಕುಂ ಹೊರಡಿಸಿದ್ದರು. ಕಳೆದ ಬಾರಿ ಚಿತ್ರೀಕರಣ ವೇಳೆ ಇವರೆಲ್ಲಾ ಏನೇನೋ ಹೇಳಿಕೆ ಕೊಟ್ಟಿದ್ದಾರಂತೆ. ಅಂದ ಹಾಗೆ ಈ ಚಿತ್ರ ತೆಲುಗಿನ ರೀಮೇಕ್.