'ಮೆಂಟಲ್ ಮಂಜ'ನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡ ಅರ್ಜುನ್ ಈಗ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅದು ಮೂರನೇ ಕ್ಲಾಸ್ ಮಂಜನಾಗಿ. ಅವರ ಹೊಸ ಚಿತ್ರ 'ಮೂರನೇ ಕ್ಲಾಸ್ ಮಂಜನ ಬಿ.ಕಾಂ ಭಾಗ್ಯ' ಚಿತ್ರ ಮುಂದಿನ ತಿಂಗಳು ತೆರೆಕಾಣಲಿದೆ.
ನಿರ್ಮಲವಾದ ಪ್ರೀತಿಗೆ ವಿದ್ಯೆ ಮುಖ್ಯವಲ್ಲ ಎಂಬ ಸಂದೇಶ ಚಿತ್ರದಲ್ಲಿದೆ ಎನ್ನುತ್ತಾರೆ ನಿರ್ದೇಶಕ ಸಾಯಿಸಾಗರ್. ಖ್ಯಾತ ಜಾನಪದ ಗಾಯಕ ಆಲೂರು ನಾಗಪ್ಪ ಚಿತ್ರದಲ್ಲಿ ಒಂದು ಹಾಡು ಹಾಡಿದ್ದಾರೆ. ಅಶ್ವಿನಿ ಮತ್ತು ಸುನೀತ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ.
ವೆಂಕಟ್-ನಾರಾಯಣ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. 60 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದ ಮೂಲಕ ಕ್ಲಾಸ್ ಪ್ರೇಕ್ಷಕರನ್ನು ತಲುಪುವುದು ನಟ ಅರ್ಜುನ್ ಅವರ ಮತ್ತೊಂದು ಗುರಿ. ಈ ಹಿಂದೆ ನಿರ್ದೇಶಕ ಸಾಯಿಸಾಗರ್ ಹಾಗೂ ಅರ್ಜುನ್ ಜೊತೆಯಾಗಿ ಮಾಡಿದ 'ತಿಮ್ಮ' ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಲಿಲ್ಲ. ಆದರೆ ಅದರಲ್ಲಿನ ಸರೋಜದೇವಿಯವರ ಕ್ಲೈಮ್ಯಾಕ್ಸ್ ದೃಶ್ಯವನ್ನು ಮಾತ್ರ ಜನ ಮೆಚ್ಚಿದ್ದರು.