ಕನ್ನಡ ಸಿನಿಮಾವನ್ನು ಹಿಮಾಲಯದಲ್ಲಿ ಚಿತ್ರೀಕರಣ ಮಾಡುತ್ತಾರೆ ಎನ್ನುವುದೇ ದೊಡ್ಡ ವಿಷಯ. ನಿರ್ದೇಶಕರು ಚಿತ್ರದಲ್ಲಿ ಹಿಮಾಲಯವೇ ಪ್ರಮುಖ ಪಾತ್ರ ವಹಿಸುತ್ತದೆ ಎಂದಾಗ ಇದರಲ್ಲಿ ನಟಿಸಬೇಕು ಎಂಬ ಆಸೆಯಾಯಿತು. ಈಗ ಚಿತ್ರ ಹೇಗೆ ಬಂದಿದೆ ಎಂದು ನೋಡಲು ಕುತೂಹಲದಿಂದ ಎದುರು ನೋಡುತ್ತಿದ್ದೇನೆ ಎಂದು ತಮ್ಮ ಹೊಸ ಚಿತ್ರ ಗಂಗಾ ಕಾವೇರಿ ಬಗ್ಗೆ ಹೇಳಿಕೊಂಡರು ನಾಯಕಿ ಮಲ್ಲಿಕಾ ಕಪೂರ್.
ತೆಲುಗು, ತಮಿಳು, ಮಲೆಯಾಳಂ ಹಾಗೂ ಬಾಲಿವುಡ್‌ನಲ್ಲಿ ನಟಿಸಿರುವ ಈ ನಟಿಗೆ ಕನ್ನಡದಲ್ಲಿ ಇದು ಎರಡನೇ ಚಿತ್ರ. ಇವರು ಹಿಂದೆ ಪ್ರೇಮ್ ಜೊತೆ 'ಸವಿಸವಿ ನೆನಪು' ಚಿತ್ರದಲ್ಲಿ ನಟಿಸಿದ್ದರು. ಆದರೆ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಈಗ ಗಂಗಾಕಾವೇರಿಗಾಗಿ ಎದುರು ನೋಡುತ್ತಿದ್ದಾರೆ.
MOKSHENDRA
ಮಲ್ಲಿಕಾ ಮೊದಲು ಅಭಿನಯಿಸಿದ್ದ ಮಲೆಯಾಳಂನ ಅಲ್ಬುದ್ದ್ವೀಪ ಚಿತ್ರ ಹಿಟ್ ಆಗುತ್ತಿದ್ದಂತೆ ಬಾಲಿವುಡ್‌ನ ದಿಲ್ ಬೇಚನಾ ಪ್ಯಾರಾ ಕಾ ಮಾರಾ ಚಿತ್ರದಲ್ಲಿ ಅಭಿನಯಿಸಿದರು. ನಂತರ ತೆಲುಗು ಹಾಗೂ ತಮಿಳು ಚಿತ್ರ ಅವಕಾಶ ಸಿಕ್ಕಿತು.
ಸವಿಸವಿ ನೆನಪು ಚಿತ್ರ ಸೋತಾಗ ಕನ್ನಡದಲ್ಲಿ ಆಫರ್‌ಗಳು ಬರುತ್ತವೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ ಗಂಗಾ ಕಾವೇರಿ ಟೈಟಲ್ ಇಟ್ಟು ಹಿಮಾಲಯದಲ್ಲಿ ಶೂಟ್ ಮಾಡುವುದೆಂದಾಗ ನಿಜಕ್ಕೂ ಖುಷಿಯ ವಿಚಾರ ಎಂದರು ಮಲ್ಲಿಕಾ ಕಪೂರ್. ಚಿತ್ರವನ್ನು ವಿಷ್ಣುಕಾಂತ್ ನಿರ್ದೇಶಿಸಿದ್ದಾರೆ.