ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹೌಸ್‌‌ಫುಲ್‌ನಲ್ಲಿ ಚಾಪ್ಲಿನ್ ಪ್ರತಿಮೆ
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ನಟ ನಿರ್ದೇಶಕ ಹೇಮಂತ್ ಹೆಗಡೆ ಒಂದಷ್ಟು ದಿನ ಬಾಲಿವುಡ್‌ಗೆ ತೆರಳಿದ್ದರು. ಅಲ್ಲಿಂದ ಮರಳಿದ ಅವರು ಹೌಸ್‌‌ಫುಲ್ ಕನ್ನಡ ಚಿತ್ರ ಕೈಗೆತ್ತಿಕೊಂಡರು. ಇದೀಗ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರೈಸಿದ್ದಾರೆ. ಹಾಡುಗಳನ್ನು ಚಿತ್ರಿಸುವುದಷ್ಟೇ ಬಾಕಿ ಇದೆ.

ಚಿತ್ರದ ಮುಹೂರ್ತದ ಸಂದರ್ಭದಲ್ಲಿ 62 ಅಡಿ ಎತ್ತರದ ಚಾರ್ಲಿ ಚಾಪ್ಲಿನ್ ಪ್ರತಿಕೃತಿ ನಿರ್ಮಿಸುವುದಾಗಿ ಅವರು ಮುಹೂರ್ತದ ವೇಳೆ ಹೇಳಿದ್ದರು. ಉಡುಪಿ ಬಳಿ ಸದ್ಯ ಆ ಕೆಲಸ ಪ್ರಗತಿಯಲ್ಲಿದೆ. ಇದೀಗ ಚಿತ್ರಕ್ಕಾಗಿ ಮಾತ್ರವಲ್ಲದೆ, ಕಾಯಂ ಆಗಿ ಚಾಪ್ಲಿನ್ ಮೂರ್ತಿ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ. ಚಿತ್ರದ ನೆನಪಾಗಿ ಹಾಗೂ ಪ್ರವಾಸಿ ಆಕರ್ಷಣೆಯಾಗಿಯೂ ಇರುತ್ತದೆ. ಆದರೆ ಸರಕಾರ ಇದಕ್ಕೆ ಅನುಮತಿ ನೀಡಬೇಕು ಎನ್ನುತ್ತಾರೆ ಹೇಮಂತ್.

ಹೌಸ್‌ಫುಲ್ ಚಿತ್ರ ಸಂಪೂರ್ಣ ಕಾಮಿಡಿ ಸಿನಿಮಾ. ಹೇಮಂತ್ ಚಿತ್ರದಲ್ಲಿ ಹೊಸ ಪ್ರಯೋಗ ನಡೆಸಿದ್ದಾರಂತೆ. ಕಿರಣ್ ಸಂಗೀತ ನಿರ್ದೇಶನದಲ್ಲಿ ಬ್ರೆಜಿಲಿಯನ್ ಶೈಲಿಯ ಸಂಗೀತವೂ ಬಳಕೆಯಾಗಿದೆ. ಬಾಲಿವುಡ್‌ನ ಮಿಲಿಂದ್ ಗುನಾಜಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹೌಸ್ಫುಲ್, ಚಾಪ್ಲಿನ್, ಹೇಮಂತ್