ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಾಲಿವುಡ್‌ಗೆ ಜಿಗಿದ 'ಮಂಜಣ್ಣ'
ಸುದ್ದಿ/ಗಾಸಿಪ್
Feedback Print Bookmark and Share
 
ನಿರ್ಮಾಪಕ ಮಂಜಣ್ಣ ಸದ್ಯದಲ್ಲೇ ಬಾಲಿವುಡ್‌‌ಗೆ ಹಾರಲಿದ್ದಾರೆ. ಹಾಗಂತ ಕನ್ನಡಿಗರ ಮೇಲೆ ಬೇಸರಿಸಿಕೊಂಡು ಎಂದು ಅರ್ಥ ಕಲ್ಪಿಸಬೇಕಾಗಿಲ್ಲ. ಅಲ್ಲೊಂದು ಹಿಂದಿ ಸಿನಿಮಾ ತೆಗೆದು ಒಂದು ಕೈ ನೋಡಿಯೇ ಬಿಡೋಣ ಎಂದು ಹೊರಟಿದ್ದಾರೆ.

ಅದಕ್ಕೆ ನಮ್ಮ ಕನ್ನಡ ನಟಿ ಶಿರಿನ್ ಕತೆ ಬರೆದಿದ್ದಾರೆ. ಇದನ್ನು ಹಿಂದಿಯಲ್ಲಿ ನಿರ್ಮಿಸಲು ಮಂಜಣ್ಣ ಮುಂದಾಗಿದ್ದಾರೆ. ಪಕ್ಕಾ ಹೊಡಿ ಬಡಿ ಕಥೆ. ಬಜೆಟ್ ಸ್ವಲ್ಪ ಜಾಸ್ತಿ. ನಿರ್ದೇಶಕ ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. ಚಿತ್ರಕ್ಕಾಗಿ ಮಂಜಣ್ಣ ಬಾಂಬೆ ಕರ್ನಾಟಕ ಮಧ್ಯೆ ಓಡಾಡುತ್ತಿದ್ದಾರೆ.

ಈ ಚಿತ್ರದಲ್ಲಿ ನಾಯಕಿ ಶಿರಿನ್. ಯೋಗಿ ಚಿತ್ರೀಕರಣದಲ್ಲಿ ಶಿರಿನ್ ಮಂಜಣ್ಣನಿಗೆ ಬಾಲಿವುಡ್ ಚಿತ್ರ ಮಾಡುವ ಬಗ್ಗೆ ಮಾತನಾಡಿದ್ದಾರೆ. ಇದರಿಂದ ಮಂಜಣ್ಣ ಕೂಡಾ ಆಸಕ್ತರಾಗಿ ಓಕೆ ಅಂದಿದ್ದಾರೆ. ನಾಯಕ ಯಾರು ಎಂದು ಗೊತ್ತಿಲ್ಲ. ಅಂದಹಾಗೆ ಮಂಜಣ್ಣ ಸದ್ಯ ಗೋವಾದಲ್ಲಿ ಚಿತ್ರೋತ್ಸವದಲ್ಲಿ ಬಿಜಿಯಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಾಲಿವುಡ್, ಮಂಜಣ್ಣ, ಶಿರಿನ್, ಹಿಂದಿ