ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ ಕಿಟ್ಟಿ. ಅವರು ಜನುಮದ ಗೆಳತಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರೊಂದಿಗೆ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದರು.
MOKSHENDRA
ದಿನೇಶ್ ಬಾಬು ಎಂಥ ಮಾಂತ್ರಿಕ ಎಂದರೆ ಅವರು ಸಣ್ಣ ದೃಶ್ಯಕ್ಕೂ ನೀಡುತ್ತಿದ್ದ ಮಹತ್ವದಿಂದಾಗಿ ಪ್ರೇಕ್ಷಕರಿಗೆ ಅರೆಕ್ಷಣವೂ ಬೋರ್ ಎನಿಸುವುದಿಲ್ಲ. ನನಗೆ ತಾಯಿ ಸೆಂಟಿಮೆಂಟ್ ಕುರಿತ ಹಾಡೊಂದಿದೆ. ನಿರ್ದೇಶಕರಂತೆ ನಿರ್ಮಾಪಕರು ಕೂಡಾ ಪ್ರತಿ ಹಂತದಲ್ಲೂ ಆಸಕ್ತಿ ತೋರಿಸುತ್ತಿದ್ದರು ಎಂದರು ಕಿಟ್ಟಿ.
ನಾನು ನನ್ನ ಚಿತ್ರದ ಬಗ್ಗೆ ಏನೂ ಹೇಳಲಾರೆ ನೀವೇ ನೋಡಿ ಹೇಳಿ ಎಂದರು ನಿರ್ದೇಶಕ ದಿನೇಶ್ ಬಾಬು. ಒಳ್ಳೆಯ ಚಿತ್ರ ಮಾಡುವುದಷ್ಟೇ ನಿರ್ಮಾಪಕರ ಕೆಲಸ. ಆರ್. ಮನೋಹರ್ ಈ ಚಿತ್ರವನು ನಿರ್ಮಿಸಿದ್ದಾರೆ. ಮಾಧ್ಯಮದವರು ಇಂತಹ ನಿರ್ಮಾಪಕರನ್ನು ಬೆಂಬಲಿಸಬೇಕು ಎಂದರು ನಿರ್ಮಾಪಕ ಮಂಜು.