ನಿಜವನ್ನು ಸ್ಟೈಲಾಗಿ ಹೇಳುವ ಕಾಲ ಬಂದಿದೆ. ಅದನ್ನು ಸದಭಿರುಚಿ ಮೂಲಕ ಹೇಳುವುದು ತುಂಬಾ ಕಷ್ಟದ ಕೆಲಸ ಎಂದರು ಬಿ.ಸುರೇಶ್. ಅವರು ತಮ್ಮ ನಿರ್ಮಾಣದ ಗುಬ್ಬಚ್ಚಿ ಚಿತ್ರಗಳ ಬಗ್ಗೆ ಸಂತಸ ಹಂಚಿಕೊಳ್ಳಲು ಮಾಧ್ಯಮದವರನ್ನು ಕರೆದಿದ್ದರು.
ಇವರ ಚಿತ್ರ ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ಎನ್ವೈ ಚಲನಚಿತ್ರ ವೀಡಿಯೋ ಉತ್ಸವ, ನ್ಯೂಯಾರ್ಕ್ ಅಂತಾರಾಷ್ಟ್ರೀಯ ಚಲನಚಿತ್ರ ವೀಡಿಯೋ ಉತ್ಸವ, ಭಾರತೀಯ ಅಂತಾರ್ರಾಷ್ಟ್ರೀಯ ಉತ್ಸವಗಳಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.
ದೇಶ ವಿದೇಶಗಳಿಗೆ ತೆರಳಬೇಕಾಗಿ ಬಂದಾಗ, ಚಿತ್ರದ ಬಗ್ಗೆ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ತೋರಿಸಿ ವೀಸಾ ಪಡೆಯಲಾಯಿತು. ಇಲ್ಲದಿದ್ದರೆ ಬಿನ್ ಲಾಡೆನ್ ಹೋಲುವ ನನಗೆ ವೀಸಾ ಸಿಗುತ್ತಿರಲಿಲ್ಲವೆಂದು ಹೇಳಿ ನಕ್ಕರು. ಚಿತ್ರದಲ್ಲಿ ಅನುಪ್ರಭಾಕರ್, ರಾಜೇಶ್, ಅಚ್ಚುತ ನಟಿಸಿದ್ದಾರೆ.