ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್ ಸದ್ಯದಲ್ಲೇ ನಾಯಕರಾಗುತ್ತಿದ್ದಾರೆ. ಅದಕ್ಕಾಗಿ ಜಗ್ಗೇಶ್ ಅವರಿಗೆ ಅಭಿನಯ ತರಬೇತಿ ಕೊಡಿಸಿದ್ದಾರೆ. ನನ್ನ ಕಾಲದಲ್ಲಿ ನಾಯಕನಾಗಲು ನಾನು ಪಟ್ಟ ಶ್ರಮ ಅಷ್ಟಿಷ್ಟಲ್ಲ. ನನ್ನ ಮಗ ಆ ಕಷ್ಟ ಪಡಬಾರದು. ಆದ್ದರಿಂದಲೇ ಅವನನ್ನು ಅನುಪಮ್ ಖೇರ್ ಅವರ ಅಭಿನಯ ತರಬೇತಿ ಶಾಲೆಗೆ ಕಳುಹಿಸಿದ್ದೇನೆ. ಒಂದು ವರ್ಷದ ತರಬೇತಿ ಪಡೆದಿದ್ದಾನೆ. ಜನವರಿ ಹೊತ್ತಿಗೆ ಅವನು ನಾಯಕನಾಗುವುದು ಗ್ಯಾರಂಟಿ ಎಂದರು ಜಗ್ಗೇಶ್.
MOKSHENDRA
ಬೆಂಗಳೂರಿನಲ್ಲಿ ಅಭಿನಯ ಹೇಳಿಕೊಡುವ ಸುಸಜ್ಜಿತ ತರಬೇತಿ ಶಾಲೆ ಕಡಿಮೆ. ಆದ್ದರಿಂದಲೇ ಅವನನ್ನು ಮುಂಬೈಗೆ ಕಳುಹಿಸಿದೆ. ಡ್ಯಾನ್ಸ್, ಫೈಟ್ ಹೀಗೆ ಅನೇಕ ವಿಚಾರಗಳ ಬಗ್ಗೆ ಅವನು ಕಲಿತಿದ್ದಾನೆ. ಮುಂದಿನ ವರ್ಷ ಗುರು ನಾಯಕನಾಗುತ್ತಾನೆ ಎಂದು ತಮ್ಮ ಮಗನ ಬಗ್ಗೆ ಹೇಳಿಕೊಂಡರು.
ಮಗನಿಗೆ ಖ್ಯಾತ ನಿರ್ದೇಶಕರಿಂದ ಚಿತ್ರ ನಿರ್ದೇಶಿಸಲು ಯೋಚಿಸಿದ್ದಾರೆ. ಅದು ಸಾಧ್ಯವಾಗುತ್ತದೋ ಎಂಬುದು ಗೊತ್ತಿಲ್ಲ. ಜಗ್ಗೇಶ್ ಅಭಿನಯದ 'ಎದ್ದೇಳು ಮಂಜುನಾಥ' ಚಿತ್ರ ಜನವರಿಯಲ್ಲಿ ತೆರೆಕಾಣಲಿದೆ. ಹಿರಿಯ ಪುತ್ರ ಗುರುರಾಜ್ ನಾಯಕನಾಗುವುದಕ್ಕೆ ಸಾಕಷ್ಟು ಆಫರ್‌ಗಳು ಬಂದಿದ್ದವು. ಆದರೆ ಮೊದಲು ತರಬೇತಿ ನಂತರ ನಟನೆ ಮಾಡಿಸಬೇಕು ಎಂದು ನಾನು ನಿರ್ಧರಿಸಿದ್ದರಿಂದ ಮುಂಚೆಯೇ ನಾಯಕನಾಗಲು ಬಿಡಲಿಲ್ಲ ಎಂದು ಜಗ್ಗೇಶ್ ಸಮಜಾಯಿಷಿ ನೀಡಿದರು.