'ವೆಂಕಿ' ಚಿತ್ರದ ಐಟಂ ಹಾಡಿಗೆ 7 ಲಕ್ಷ ರೂ. ಖರ್ಚಾಗಿದೆ ಎಂದು ಹೇಳಿಕೊಂಡವರು ನಿರ್ಮಾಪಕ ಲಕ್ಷ್ಮೀಕಾಂತ್. ಐಟಂ ಹಾಡಿನಲ್ಲಿ ಯಾರನ್ನು ಕುಣಿಸಬೇಕು ಎಂದು ಬಹಳ ಚರ್ಚೆ ಮಾಡಿದೆವು. ಬಾಲಿವುಡ್‌ನ ಹೆಸರಾಂತ ಐಟಂ ನಟಿಯರನ್ನು ಕುಣಿಸುವುದರಿಂದ ಚಿತ್ರ ಗೆಲ್ಲುವುದು ಅಸಾಧ್ಯ. ಆದರೆ ಕಥೆಗೆ ತಕ್ಕಂತೆ ಮತ್ತು ಬಜೆಟ್‌ಗೆ ಅನುಕೂಲವಾಗುವಂತೆ ನಟಿ ಋಷಿಕಾ ಸಿಕ್ಕರು. ಅವರು ನಮ್ಮ ಐಟಂ ಹಾಡಿನಲ್ಲಿ ಕುಣಿದಿದ್ದಾರೆ ಎಂದರು.
ಚಿತ್ರದ ಹಾಡುಗಳನ್ನು ಚಿತ್ರೀಕರಿಸಲು ಹಣ ಖರ್ಚು ಮಾಡಲು ಬಹಳಷ್ಟು ನಿರ್ಮಾಪಕರು ಹಿಂದೇಟು ಹಾಕುತ್ತಾರೆ. ಆದರೆ ನಾನು ಮತ್ತು ನಿರ್ಮಾಪಕ ಸೂರ್ಯಕಾಂತ್ ಈ ಹಾಡನ್ನು ಅದ್ದೂರಿಯಾಗಿ ಚಿತ್ರಿಸಬೇಕು ಎಂಬ ಉದ್ದೇಶದಿಂದ 7 ಲಕ್ಷ ರೂಪಾಯಿ ವೆಚ್ಚ ಮಾಡಿದ್ದೇವೆ. ಸೆಟ್ ಹಾಕಿ ಸತತ 4 ದಿನ ಒಂದೇ ಹಾಡಿಗೆ ಚಿತ್ರೀಕರಣ ಮಾಡಿದ್ದೇವೆ. ಮುಂದಿನ ತಿಂಗಳು 1 ರಂದು ಆಡಿಯೋ ಬಿಡುಗಡೆ ಮಾಡಬೇಕು ಎಂದು ನಿರ್ಧರಿಸಲಾಗಿದೆ ಎಂದರು ಲಕ್ಷ್ಮೀಕಾಂತ್.
ಚಿತ್ರದಲ್ಲಿ ಪ್ರಶಾಂತ್ ನಾಯಕ, ರಶ್ಮಿ ನಾಯಕಿ. ಹೀರೋ ಸ್ಯಾಡ್‌ಮೂಡ್ನನಲ್ಲಿ ಡಾಬಾಗೆ ಬರುತ್ತಾನೆ. ಅಲ್ಲಿಗೆ ಬರುವ ಲಾರಿ ಡ್ರೈವರ್‌ಗಳು ಹಾಗೂ ಋಷಿಕಾ ಹಾಡಿನಲ್ಲಿ ಕುಣಿಯುತ್ತಾರೆ. ಮಾಸ್ ಜನರಿಗೆ ಇಷ್ಟವಾಗುವಂತೆ ಹಾಡನ್ನು ಚಿತ್ರಿಸಲಾಗಿದೆ ಎನ್ನುತ್ತಾರೆ ನಿರ್ದೇಶಕ ಮಾಧವ್.