ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹಿಂದಿಗೆ ಸೈನೆಡ್
ಸುದ್ದಿ/ಗಾಸಿಪ್
Feedback Print Bookmark and Share
 
ಸೈನೆಡ್ ಚಿತ್ರದ ಹಿಂದಿ ರೀಮೇಕ್ ಸೆಟ್ಟೇರುವುದು ಖಚಿತವಾಗಿದೆ. ಎ.ಎಂ.ಆರ್. ರಮೇಶ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಚಿತ್ರ ಸಂಸ್ಥೆಯಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಕನ್ನಡ ಚಿತ್ರದಲ್ಲಿ ಕೆಲಸ ಮಾಡಿದ ಅನೇಕರು ಇಲ್ಲಿ ಕೆಲಸ ಮಾಡಲಿದ್ದಾರೆ.

ಆದರೆ ಕನ್ನಡದಲ್ಲಿದ್ದ ಛಾಯಾಗ್ರಾಹಕ ಆರ್‌‌ಡಿ ಅಲ್ಲಿರುವುದಿಲ್ಲ. ಅವರ ಜಾಗಕ್ಕೆ ದ್ವಾರಕನಾಥ್ ಬಂದಿದ್ದಾರೆ. ಮೂಲ ಚಿತ್ರಕ್ಕೆ ಚಿತ್ರೀಕರಣ ನಡೆಸಿದ ಜಾಗದಲ್ಲಿಯೇ ಚಿತ್ರೀಕರಣ ನಡೆಸಲಾಗುತ್ತದೆ. ಕಲಾವಿದರ ಆಯ್ಕೆ ನಡೆಯುತ್ತಿದೆ. ಮುಖ್ಯ ಪಾತ್ರದಲ್ಲಿ ಬಾಲಿವುಡ್ ಕಲಾವಿದರು ನಟಿಸಲಿದ್ದಾರೆ.

ಹಿಂದಿ ಅವತರಣಿಕೆಯಲ್ಲಿ ಯಾವ್ಯಾವ ಕಲಾವಿದರು ಇರುತ್ತಾರೆ ಎಂಬುದನ್ನು ನಿರ್ದೇಶಕ ರಮೇಶ್ ಬಹಿರಂಗಪಡಿಸುವುದಿಲ್ಲ. ಜನವರಿ ಮೊದಲ ವಾರದಲ್ಲಿ ಚಿತ್ರ ಸೆಟ್ಟೇರಲಿದೆ. ಇದರ ಮುಹೂರ್ತ ಕೂಡಾ ಬೆಂಗಳೂರಿನಲ್ಲೇ ನಡೆಯುತ್ತಿದೆ ಎಂಬುದು ಮತ್ತೊಂದು ವಿಶೇಷ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೈನೆಡ್, ಸುನೀಲ್ ಶೆಟ್ಟಿ, ದ್ವಾರಕನಾಥ್, ಹಿಂದಿ