ಆತ್ಮೀಯ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಅಕುಲ್ ಈಗ ಗಗನ ಚುಕ್ಕಿ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಪ್ರೀತಿಯಲ್ಲಿ ಸೋತರೂ ಜೀವನದಲ್ಲಿ ಗೆಲ್ಲಬೇಕು ಎಂಬ ಸಂದೇಶವನ್ನಿಟ್ಟುಕೊಂಡು ಲವ್, ಸೆಂಟಿಮೆಂಟ್, ಆಕ್ಷನ್ಗೆ ಸಮಾನವಾಗಿರುವ ಚಿತ್ರ ಗಗನ ಚುಕ್ಕಿ.
MOKSHENDRA
ಈಗಾಗಲೇ ಗಗನಚುಕ್ಕಿ ಹಾಗೂ ಭರಚುಕ್ಕಿಯಲ್ಲಿ ಒಂದು ದಿನ ಮತ್ತು ಮೈಸೂರಿನಲ್ಲಿ ಎರಡು ದಿನ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬೆಂಗಳೂರಿಗೆ ಮರಳಿದೆ. ಚಿತ್ರದಲ್ಲಿ 6 ಹಾಡುಗಳಿದ್ದು ಹೃದಯ ಶಿವ, ಜಯಂತ್ ಕಾಯ್ಕಿಣಿ, ಕವಿರಾಜ್ ಹಾಗೂ ಮಹೇಂದ್ರ ಅವರು ಸಾಹಿತ್ಯ ಬರೆದಿದ್ದಾರೆ.
ಚಿತ್ರಕ್ಕೆ ಇಬ್ಬರು ನಾಯಕಿಯರು. ಗಾಳಿಪಟ ಖ್ಯಾತಿಯ ಭಾವನಾ ರಾವ್ ಹಾಗೂ ಉಡ ಚಿತ್ರದ ನಾಯಕಿ ಸಂಚಿತಾ. ಉಳಿದಂತೆ ಶರತ್ ಲೋಹಿತಾಶ್ವ, ರಮೇಶ್ ಭಟ್, ಮಾಸ್ಟರ್ ಆನಂದ್ ಮುಂತಾದವರು ತಾರಾಬಳಗದಲ್ಲಿದ್ದಾರೆ.