ಒಂದೊಮ್ಮೆ ಚಿತ್ರರಂಗದಲ್ಲಿ ಮಿಂಚಿದ ಮಾಲಾಶ್ರೀ ಈಗ ಮತ್ತೊಮ್ಮೆ ಬೆಳ್ಳತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಬಾರಿ ಕಿರಣ್ ಬೇಡಿಯಾಗಿ ದುಷ್ಟರನ್ನು ಸಂಹರಿಸಲಿದ್ದಾರೆ. ದುರ್ಗಿ ಚಿತ್ರದ ನಂತರ ಮಾಲಾಶ್ರೀ ಬೇರೆ ಚಿತ್ರಗಳಲ್ಲಿ ನಟಿಸಿರಲಿಲ್ಲ. ಅವರ ಪತಿ ನಿರ್ಮಾಪಕ ರಾಮು ಕಿರಣ್ ಬೇಡಿ ಚಿತ್ರವನ್ನು ನಿರ್ಮಿಸಿದ್ದು, ಸಾಯಿಪ್ರಕಾಶ್ ನಿರ್ದೇಶಿಸಿದ್ದಾರೆ. ಚಿತ್ರ ಚೆನ್ನಾಗಿ ಮೂಡಿ ಬಂದಿರುವ ಬಗ್ಗೆ ಮಾಲಾಶ್ರೀ ಸಂತಸ ವ್ಯಕ್ತಪಡಿಸುತ್ತಾರೆ.
ಇಲ್ಲಿನ ಒಂದೊಂದು ಫೈಟ್‌ಗಳಿಗೆ 60 ರಿಂದ 70 ಲಕ್ಷದವರೆಗೆ ಖರ್ಚು ಮಾಡಿದ್ದಾರಂತೆ. ಹಿಂದಿನ ಚಿತ್ರದಲ್ಲಿ ಫೈಟ್ ಮಾಡಿರುವುದಕ್ಕೂ ಈ ಚಿತ್ರದಲ್ಲಿ ಫೈಟ್ ಮಾಡಿರುವುದಕ್ಕೂ ತುಂಬಾ ವ್ಯತ್ಯಾಸವಿದೆ. ಅದನ್ನು ಬಿಡುಗಡೆಯಾದ ಮೇಲೆ ಪ್ರೇಕ್ಷಕರೇ ಹೇಳುತ್ತಾರೆ ಎಂದರು.
MOKSHENDRA
ಇದು ಕಿರಣ್ ಬೇಡಿ ಅವರ ಜೀವನಾಧರಿತ ಚಿತ್ರವಲ್ಲ. ಬದಲಾಗಿ ಪಕ್ಕ ಕಮರ್ಷಿಯಲ್ ಚಿತ್ರ. ಆದ್ದರಿಂದ ಕಥೆಯನ್ನು ಸಿನಿಮಾಟಿಕ್ ಆಗಿ ಮಾಡಿದ್ದೇವೆ. ಕಾನ್‌ಸ್ಟೇಬಲ್ ಮಗಳೊಬ್ಬಳು ಐಪಿಎಸ್ ಅಧಿಕಾರಿಯಾಗುವ ಕಥೆಯನ್ನು ಚಿತ್ರ ಒಳಗೊಂಡಿದೆ ಎಂದು ಚಿತ್ರದ ಎಳೆ ಬಿಟ್ಟು ಕೊಟ್ಟರು.
ಬಹುದಿನಗಳ ನಂತರ ಬರುವ ತಮ್ಮ ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಭಯವೂ ಕಾಡುತ್ತದೆ. ಚಿತ್ರ ಸೋತರೆ ಅದರ ಹೊಣೆಯನ್ನು ನಾವೇ ಹೋರುತ್ತೇವೆ. ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ನಾನು ಮತ್ತು ರಾಮು ಕುಳಿತು ಚರ್ಚಿಸಿ ಮುಂದೆ ಆ ರೀತಿ ಆಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದರು. ಕಿರಣ್ ಬೇಡಿಯ ಅಬ್ಬರ ತೆರೆ ಮೇಲೆ ಯಾವ ರೀತಿ ಇರುತ್ತದೆ ಎಂಬುದನ್ನು ಮಾತ್ರ ಕಾದು ನೋಡಬೇಕು.