ದರ್ಶನ್ ಮತ್ತು ಓಂ ಪ್ರಕಾಶ್ ರಾವ್ ಮತ್ತೆ ಒಂದಾಗುತ್ತಿದ್ದಾರೆ. ಮಂಡ್ಯ ಚಿತ್ರದ ನಂತರ ಅವರ ಸಂಬಂಧ ಅಷ್ಟಕ್ಕಷ್ಟೇ ಇತ್ತು. ಈಗ ಅವರಿಬ್ಬರನ್ನು ಒಂದುಗೂಡಿಸುವವರು ರಾಕ್‌ಲೈನ್ ವೆಂಕಟೇಶ್. ದರ್ಶನ್ ನಾಯಕನಾಗಿ ಓಂ ನಿರ್ದೇಶದ ಹೊಸ ಚಿತ್ರ ಡಿ.15ರಂದು ಸೆಟ್ಟೇರಲಿದೆ.
ಚಿತ್ರಕ್ಕೆ ನಾಯಕಿ ಇನ್ನೂ ನಿಕ್ಕಿಯಾಗಿಲ್ಲ. ಈ ನಡುವೆ ದರ್ಶನ್ ಅಭಯ್ ಚಿತ್ರ ಡಿ.5ರಂದು ಸೆಟ್ಟೇರುತ್ತಿದೆ. ಒಟ್ಟೊಟ್ಟಿಗೆ ಎರಡು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ದರ್ಶನ್ ಈಗ ಬ್ಯುಸಿಯಾಗಿದ್ದಾರೆ. ದರ್ಶನ್ ಹಾಗೂ ಪ್ರಕಾಶ್ ಜೊತೆಯಾದರೆ ಮತ್ತಷ್ಟು ಮಸಾಲೆ ಚಿತ್ರಗಳು ಬರಬಹುದು ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.
ಸೋಲಿನ ಸುಳಿಯಲ್ಲಿ ಸಿಲುಕಿದ್ದ ದರ್ಶನ್ ಅವರನ್ನು ಗಜ ಮೇಲೆತ್ತಿದೆ. ಇದರಿಂದ ತಮ್ಮ ಹಿಂದಿನ ಸ್ಟಾರ್ ವ್ಯಾಲ್ಯೂವನ್ನು ದರ್ಶನ್ ಮತ್ತೆ ಪಡೆದಿದ್ದಾರೆ. 50 ಲಕ್ಷಕ್ಕೆ ಇಳಿದಿದ್ದ ತಮ್ಮ ಸಂಭಾವನೆಯನ್ನು ಮತ್ತೆ 80ಲಕ್ಷಕ್ಕೆ ಏರಿಸಿಕೊಂಡಿದ್ದಾರೆ. ಮೊನ್ನೆ ತಾನೆ ಬಿಡುಗಡೆಯಾದ ನವಗ್ರಹ ಚಿತ್ರದ ಬಗ್ಗೆ ಕೂಡಾ ಮೆಚ್ಚುಗೆ ವ್ಯಕ್ತವಾಯಿತು.