ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನವೀನ್ ಕೃಷ್ಣ 'ನಿರ್ದೇಶಕ'
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ಧಿಮಾಕು ಚಿತ್ರದ ಮೂಲಕ ಗಾಂಧಿನಗರದ ಗಮನ ಸೆಳೆದ ನವೀನ್ ಕೃಷ್ಣ ಈಗ ನಿರ್ದೇಶಕರಾಗುತ್ತಿದ್ದಾರೆ. ಹಾಗಂತ ಇವರು ಚಿತ್ರ ನಿರ್ದೇಶನ ಮಾಡುತ್ತಿಲ್ಲ. ಬದಲಾಗಿ ನಿರ್ದೇಶಕ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬದುಕಿನ ವ್ಯಂಗ್ಯಗಳನ್ನು ಕುರಿತು ಇದುವರೆಗೂ ಹಲವಾರು ಚಿತ್ರಗಳು ಬಂದಿವೆ. ಅದರಲ್ಲೂ ಜಗ್ಗೇಶ್ ಅಭಿನಯದ ಚಿತ್ರ ಮಿಸ್ಟರ್ ಬಕ್ರದಲ್ಲಿ ಹಳ್ಳಿಯವನು ಸಿನಿಮಾ ನಟನಾಗಬೇಕು ಎಂದು ಗಾಂಧಿನಗರಕ್ಕೆ ಬಂದು ಹೇಗೆ ಮೋಸ ಹೋಗುತ್ತಾನೆ ಎಂಬುದನ್ನು ತೋರಿಸಲಾಗಿತ್ತು.

ಈಗ ನಿರ್ದೇಶಕ ಎಂಬ ಚಿತ್ರದಲ್ಲಿ ಗಾಂಧಿನಗರದಲ್ಲಿ ನಿರ್ದೇಶಕನನ್ನು ಹೇಗೆ ಕಡೆಗಣಿಸಲಾಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲು ಹೊರಟವರು ಶಿವರಾಜ್ ಹೊಸಕೆರೆಹಳ್ಳಿ. ಧಿಮಾಕು ಚಿತ್ರದ ನಂತರ ನವೀನ್ ಕೃಷ್ಣ ತನ್ನ ಅಭಿನಯವನ್ನು ಮೆಚ್ಚಿ ಅನೇಕ ಆಫರ್‌ಗಳು ಬರಬಹುದೆಂದು ಅಂದುಕೊಂಡಿದ್ದರು. ಅದರಂತೆ ಈಗ ಈ ಹೊಸ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ.

ಸಿನಿಮಾ ರಂಗದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಜವಾಬ್ದಾರಿ ನಿರ್ದೇಶಕನದ್ದು. ಆತ ನಿರ್ದೇಶಕರನಾಗುವುದಕ್ಕೆ ಮುನ್ನ ಅನೇಕರ ಬಳಿ ಸಹಾಯಕನಾಗಿ ದುಡಿದು ಹಲವು ತೊಂದರೆಗಳನ್ನು ಅನುಭವಿಸಿ ನಂತರ ನಿರ್ದೇಶಕನಾಗುತ್ತಾನೆ. ಇದೇ ಕಥಾ ಹಂದರವನ್ನಿಟ್ಟುಕೊಂಡು ಶಿವರಾಜ್ ಚಿತ್ರ ಮಾಡುತ್ತಿದ್ದಾರೆ. ಇವರು ಈ ಹಿಂದೆ ಬೆಳ್ಳಿಬೆಟ್ಟ ಚಿತ್ರ ನಿರ್ದೇಶಿಸಿದ್ದರು. ಇವರ ಹೊಸ ಚಿತ್ರಕ್ಕೆ ಸ್ವಾತಿ ಹಾಗೂ ನವ್ಯರನ್ನು ನಾಯಕಿರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ವೆಂಕಟ್ ನಾರಾಯಣ್ ಸಂಗೀತ ಸಂಯೋಜಿಸಿದ್ದು, ಜನವರಿಯಲ್ಲಿ ಚಿತ್ರ ಸೆಟ್ಟೇರಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಧಿಮಾಕು, ನವೀನ್ ಕೃಷ್ಣ, ನಿರ್ದೇಶಕ, ಶಿವರಾಜ್ ಹೊಸಕೆರೆಹಳ್ಳಿ