ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಮ ಮತ್ತು ಫ್ಯಾಮಿಲಿ ಡ್ರಾಮಾದ 'ನೀನ್ಯಾರೇ'
ಸುದ್ದಿ/ಗಾಸಿಪ್
Feedback Print Bookmark and Share
 
ಭಾರೀ ಸಮಯದಿಂದ ಬಿಡುಗಡೆಗೆ ಎದುರು ನೋಡುತ್ತಿದ್ದ ನೀನ್ಯಾರೇ ಚಿತ್ರಕ್ಕೆ ಈಗ ಬಿಡುಗಡೆಯ ಭಾಗ್ಯ ಕೂಡಿ ಬಂದಿದೆ. ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುತ್ತಿದೆ. ಸೆನ್ಸಾರ್ ಮಂಡಳಿಗೆ ಚಿತ್ರವನ್ನು ತೋರಿಸಿ ಯು ಪ್ರಮಾಣ ಪತ್ರ ಪಡೆದಿದೆ.

ನೀನ್ಯಾರೇ ಚಿತ್ರದಲ್ಲಿ ಸಾಮಾನ್ಯ ಪ್ರೇಮಕಥೆ ಇರುವುದಿಲ್ಲ. ನಾಯಕ ನಾಯಕಿಯ ಪ್ರೇಮವಲ್ಲದೆ, ಒಬ್ಬ ನಿಜವಾದ ತಂದೆ ಹಾಗೂ ಮಗನ ನಡುವೆ ಯಾವ ರೀತಿಯ ಸಂಬಂಧ ಇರಬೇಕು?, ಸದಾ ತನ್ನ ಮಗ ಸುಖವಾಗಿರಬೇಕು ಎಂದು ಬಯಸುವ ತಂದೆಗೆ ಕೊನೆಯ ಕಾಲದಲ್ಲಿ ಬೇಕಾಗಿರುವುದಾದರು ಏನೆಂದು ನಮ್ಮ ಚಿತ್ರದಲ್ಲಿ ತೋರಿಸಲಾಗಿದೆ ಎಂದು ನಿರ್ದೇಶಕ ಶಶಿ ಸಿಂಧೂರ್ ತಿಳಿಸುತ್ತಾರೆ.
MOKSHENDRA

ಸಾಮಾನ್ಯವಾಗಿ ಎಲ್ಲ ಹೊಸ ನಿರ್ದೇಶಕರು ತಾವು ನಿರ್ದೇಶಿಸುವ ಚಿತ್ರ ಪ್ರೇಮಕಥೆ ಆಗಿರಬೇಕೆಂದು ಇಷ್ಟಪಡುತ್ತಾರೆ. ಅದೇ ದಾಟಿಯಲ್ಲಿ ನಿರ್ದೇಶಕ ಶಶಿ ಸಿಂಧೂರ್ ತಾವು ನಿರ್ದೇಶಿಸುವ ಮೊದಲ ಚಿತ್ರ ನೀನ್ಯಾರೇ ಚಿತ್ರಕ್ಕೆ ಸಾಮಾನ್ಯ ಪ್ರೇಮಕತೆಯಲ್ಲದೆ ಅದರ ಜೊತೆ ಫ್ಯಾಮಿಲಿ ಡ್ರಾಮಾ ಕೂಡಾ ಸೇರಿಸಿದ್ದಾರೆ.

ಚಿತ್ರಕ್ಕೆ ಹೊಸ ಮುಖಗಳಾದ ಸೂರಜ್ ಮತ್ತು ಸಂಭ್ರಮ ನಾಯಕ, ನಾಯಕಿಯರಾಗಿ ಚಿತ್ರಾ ಶೆಣೈ, ಓಂ ಪ್ರಕಾಶ್ ರಾವ್, ಶರತ್ ಬಾಬು ತುಳಸಿ, ಶಿವಮಣಿ ನಟಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನೀನ್ಯಾರೇ ಶಶಿ ಸಿಂಧೂರ್ ಸೂರಜ್ ಸಂಭ್ರಮ