ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶಿಶಿರದಲ್ಲಿ ಮತ್ತೆ 'ಪ್ರೇಮಾಂಕುರ'
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ಕನ್ನಡದಲ್ಲಿ ತನ್ನದೇ ಆದ ವಿಶಿಷ್ಟ ಅಭಿನಯದ ಮೂಲಕ ನಾಯಕಿ ಪಟ್ಟ ಗಿಟ್ಟಿಸಿಕೊಂಡು ಕನ್ನಡಿಗರ ಮನ ಸೂರೆಗೊಂಡಿದ್ದರು. ಓಂ, ನಮ್ಮೂರ ಮಂದಾರ ಹೂವೇ ಚಿತ್ರದಿಂದ ಹಿಡಿದು ಆಪ್ತಮಿತ್ರ ಚಿತ್ರದವರೆಗೂ ಇವರ ಅಭಿನಯ ಮುಂದುವರಿಯಿತು. ಆದರೆ ಮದುವೆಯಾದ ನಂತರ ಮಾತ್ರ ಪ್ರೇಮಾ ಯಾಕೋ ಚಿತ್ರರಂಗ ಬಿಟ್ಟು ಮನೆ ಸೇರಿಕೊಂಡರು. ಮತ್ತೆ ಚಿತ್ರರಂಗದ ಸಹವಾಸಕ್ಕೆ ಬರಲಿಲ್ಲ.

ಆದರೆ ಈಗ ಮತ್ತೊಮ್ಮೆ ಬಣ್ಣ ಹಚ್ಚುತ್ತಿದ್ದಾರೆ. ಈ ಹಿಂದೆ ಅನೇಕ ಆಫರ್‌ಗಳು ಬಂದರೂ ಅದನ್ನು ಒಪ್ಪಲಿಲ್ಲ. ಆದರೆ ಶಿಶಿರ ಚಿತ್ರದ ನಿರ್ದೇಶಕ ಮಂಜು ಸ್ವರಾಜ್ ಮಾತ್ರ ಪ್ರೇಮಾ ಅವರಿಗೆ ಒಪ್ಪುವಂತಹ ಕಥೆ ಮಾಡಿಕೊಂಡು ಅವರನ್ನು ಭೇಟಿಯಾಗಿ ಒಪ್ಪಿಗೆ ಪಡೆದಿದ್ದಾರೆ. ಪ್ರೇಮಾ ಕೂಡಾ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಓಕೆ ಅಂದಿದ್ದಾರೆ.

ಓಂ ಹಾಗೂ ನಮ್ಮೂರ ಮಂದಾರ ಹೂವೇ ಚಿತ್ರದ ನಟನೆ ಪ್ರೇಮಾರಿಗೆ ಕನ್ನಡದಲ್ಲಿ ಇನ್ನಷ್ಟು ಆಫರ್‌ಗಳು ಸಿಗುವಂತೆ ಮಾಡಿತು. ಈಗ ಶಿಶಿರ ಚಿತ್ರದ ಮೂಲಕ ಮತ್ತೆ ತಮ್ಮ ಅಭಿಮಾನಿಗಳ ಮನ ತಣಿಸಲಿದ್ದಾರೆ. ಶಿಶಿರ ಚಿತ್ರದ ಚಿತ್ರೀಕರಣ ಸೋಮವಾರಪೇಟೆ ಸುತ್ತಮುತ್ತ ನಡೆಯುತ್ತಿದೆ. ಚಿತ್ರದಲ್ಲಿ ಯುಗ ಯುಗಗಳೇ ಸಾಗಲಿ ಚಿತ್ರದ ನಾಯಕ ಯಶಸ್ ಹಾಗೂ ಮೇಘನಾ ನಟಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರೇಮಾ ಶಿಶಿರ ಮಂಜು ಸ್ವರಾಜ್