ತನ್ನ ಹಾಸ್ಯ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಸರಿಗಮ ವಿಜಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಕಿರಣ್ ಬೇಡಿ ಚಿತ್ರೀಕರಣದ ಸಾಹಸ ದೃಶ್ಯದಲ್ಲಿ ಕಾರೊಂದು ಪಲ್ಟಿಯಾಗಿ ಕಾಲಿಗೆ ಪೆಟ್ಟು ಬಿದ್ದು ಆಸ್ಪತ್ರೆಯಲ್ಲಿದ್ದರು. ಈಗ ಸಂಪೂರ್ಣ ಗುಣಮುಖರಾಗಿದ್ದಾರೆ.
ಆಸ್ಪತ್ರೆಯಲ್ಲಿದ್ದ ಅವರ ಶುಶ್ರೂಷೆ ಹಾಗೂ ಉಪಚಾರವನ್ನು ನಿರ್ಮಾಪಕ ರಾಮು ನೋಡಿಕೊಂಡರಂತೆ. ಸುಮಾರು 6 ಲಕ್ಷ ರೂ. ಔಷಧೋಪಾಚಾರಕ್ಕೆ ಖರ್ಚಾದರೂ ಅದನ್ನು ರಾಮು ಅವರೇ ಭರಿಸಿದ್ದಾರೆ. ತಮ್ಮ ತಂಡದಿಂದಾದ ತಪ್ಪನ್ನು ತಾವೇ ಸರಿ ಮಾಡಿದ್ದಾರೆ. ಮತ್ತೆ ಮೊದಲಿನಂತಾದ ವಿಜಿಯನ್ನು ಕಂಡು ಖುಷಿ ಪಟ್ಟಿದ್ದಾರೆ.
ವಿಜಿ ಆಸ್ಪತ್ರೆಯಲ್ಲಿದ್ದಾಗ ಬಿಡುವಿದ್ದ ಸಮಯದಲ್ಲಿ ಮಾಲಾಶ್ರೀ ಕೂಡಾ ಬಂದು ಯೋಗಕ್ಷೇಮ ವಿಚಾರಿಸಿದ್ದಾರೆ. ನಿಜಕ್ಕೂ ಅವರ ದೊಡ್ಡ ಗುಣವನ್ನು ಮೆಚ್ಚಬೇಕು ಎಂದು ಹೇಳುತ್ತಾ ವಿಜಿ ಭಾವುಕರಾದರು. ಈಗ ಸಂಪೂರ್ಣ ಚೇತರಿಸಿಕೊಂಡಿರುವ ವಿಜಿ ಎರಡು ವಾರದಲ್ಲಿ ಮತ್ತೆ ಶೂಟಿಂಗ್‌ಗೆ ಹೋಗಲಿದ್ದಾರೆ.