ಭಾರೀ ಸಮಯದ ನಂತರ ಕಣ್ಣೀರಿನ ತಾರೆ ಶ್ರುತಿ ಅವರ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಈ ಬಾರಿ ಅಕ್ಕ-ತಂಗಿ ಚಿತ್ರದಲ್ಲಿ ಯಾವ ರೀತಿ ಮಿಂಚುತ್ತಾರೋ ಗೊತ್ತಿಲ್ಲ. ಆದರೆ ಅವರು ಈ ಚಿತ್ರದ ಬಗ್ಗೆ ತುಂಬಾ ಆಸಕ್ತಿಯಿಂದ ಇದ್ದಾರೆ. ಈ ಚಿತ್ರವನ್ನು ಅವರ ಪತಿ ಎಸ್.ಮಹೇಂದರ್ ನಿರ್ದೇಶಿಸಿದ್ದಾರೆ. ನಾವಿಬ್ಬರು ಜೊತೆಯಾಗಿದ್ದ ಎಲ್ಲ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ ಎನ್ನುತ್ತಾರೆ ಶ್ರುತಿ.
ಜನ ನನ್ನನ್ನು ಇಂದಿಗೂ ಕಣ್ಣೀರಿನ ಬ್ರಾಂಡ್ ಆಗಿಯೇ ಗುರುತಿಸುತ್ತಾರೆ. ಒಬ್ಬ ಕಲಾವಿದೆಯಾಗಿ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಪಾತ್ರ ನಿರ್ವಹಿಸುವುದೇ ಧರ್ಮ ಎಂದು ನಂಬಿದ್ದೇನೆ. ಹಾಗಾಗಿ ನಾನು ಕಣ್ಣೀರಿನ ಪಾತ್ರಗಳಿಗೆ ಬ್ರಾಂಡ್ ಆಗಿದ್ದಕ್ಕೆ ಯಾವುದೇ ಬೇಜಾರಿಲ್ಲ ಎನ್ನುತ್ತಾರೆ ಅವರು. ಇವರ ತಂಗಿಯಾಗಿ ದುನಿಯಾ ರಶ್ಮಿ ನಟಿಸಿದ್ದಾರೆ.
MOKSHENDRA
ಅಕ್ಕ-ತಂಗಿ ಕಣ್ಣೀರಿನ ಕಥೆಯಲ್ಲ. ಇದು ಬಾಳಿನ ಕಥೆ. ಇದೊಂದು ಕಾಮಿಡಿ ಚಿತ್ರವೂ ಹೌದು. ಚಿತ್ರ ನೋಡಿದ ಪ್ರೇಕ್ಷಕರು ನಕ್ಕು ಸುಸ್ತಾಗುವುದರಲ್ಲಿ ಸಂಶಯವಿಲ್ಲ. ಚಿತ್ರದಲ್ಲಿ ವಿಭಿನ್ನ ಭಾಷೆಯನ್ನು ಬಳಸಿದ್ದೇವೆ. ಕನ್ನಡ ನಾಡಿನ ಅಪರೂಪದ ಭಾಷೆಯದು. ಹೆಚ್ಚಿನ ಕನ್ನಡಿಗರು ಅದನ್ನು ಕೇಳಿಯೇ ಇಲ್ಲ. ಇದೇ ನಮ್ಮ ಚಿತ್ರದ ಸರ್ಪ್ರೈಸ್ ಎನ್ನುತ್ತಾರೆ ಶ್ರುತಿ. ಯಾವು ದಕ್ಕೂ ಚಿತ್ರ ಬಿಡಗಡೆಯಾಗುವವರೆಗೆ ಕಾಯಬೇಕು.