ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಂತಿಮ ಘಟ್ಟದಲ್ಲಿ 'ಸರ್ಕಸ್'
ಸುದ್ದಿ/ಗಾಸಿಪ್
Feedback Print Bookmark and Share
 
ಗಣೇಶ್ ಹಾಗೂ ಅರ್ಚನಾ ಗುಪ್ತ ಅಭಿನಯದ ಸರ್ಕಸ್ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಇದರ ಹೆಚ್ಚಿನ ಭಾಗ ರೈಲಿನಲ್ಲಿಯೇ ನಡೆದಿದೆ. ಬೊಂಬಾಟ್ ಹಾಗೂ ಸಂಗಮ ಚಿತ್ರದ ಸೋಲಿನ ನಂತರ ಗಣೇಶ್ ಸರ್ಕಸ್ ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರವನ್ನು ದಯಾಳ್ ಸ್ವತಃ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ.

ಸರ್ಕಸ್ ಚಿತ್ರದಲ್ಲಿ 25 ದಿನ ರೈಲಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಬೆಳಗೊಳದಿಂದ ಕೆ.ಆರ್. ನಗರ ನಡುವೆ ಓಡುವ ರೈಲಿನಲ್ಲಿ ಚಿತ್ರೀಕರಣ ಮಾಡಿದ್ದಾರೆ. ರೈಲಿನಲ್ಲಿ ಚಿತ್ರೀಕರಣ ಮಾಡಿರುವುದು ಚಿತ್ರದ ಕಥೆಗಾಗಿಯೇ ಹೊರತು ಗೆಲ್ಲುತ್ತದೆ ಎಂಬ ನಂಬಿಕೆಗಾಗಿ ಅಲ್ಲ ಎನ್ನುತ್ತಾರೆ ದಯಾಳ್ ಪದ್ಮನಾಭ್.
MOKSHENDRA

ರೈಲಿನಲ್ಲಿ ಚಿತ್ರೀಕರಣ ಮಾಡುವುದು ಸುಲಭವಲ್ಲ. ಒಂದು ದಿನದ ಬಾಡಿಗೆ 2 ಲಕ್ಷದ 25 ಸಾವಿರ ರೂ. ಕನ್ನಡ ಚಿತ್ರರಂಗದಲ್ಲಿ 25 ದಿನ ರೈಲಿನಲ್ಲಿ ಚಿತ್ರೀಕರಣ ಮಾಡಿದೆ ಉದಾಹರಣೆಗಳೇ ಇಲ್ಲ. ದಕ್ಷಿಣ ಭಾರತದ ಚಿತ್ರರಂಗದಲ್ಲೇ ನಾನು ಮಾಡಿದಷ್ಟು ದಿನ ರೈಲಿನಲ್ಲಿ ಚಿತ್ರೀಕರಣ ಮಾಡಿಲ್ಲ. ದುಬಾರಿಯಾದರೂ ಚಿತ್ರಕಥೆಗೆ ಬೇಕಾಗಿದ್ದರಿಂದ ಸರ್ಕಸ್ ಚಿತ್ರದ ಚಿತ್ರೀಕರಣ ಮಾಡಬೇಕಾಯಿತು ಎಂದು ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡರು ದಯಾಳ್.

ಈ ಚಿತ್ರವಾದರೂ ಗಣೇಶ್‌ಗೆ ಬ್ರೇಕ್ ಕೊಡುತ್ತದೊ ಎಂದು ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗಣೇಶ್ ಅರ್ಚನಾ ಗುಪ್ತ ಸರ್ಕಸ್