ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಮಿಗಳದೊಂದು 'ಡವ್ ಏರಿಯಾ'
ಸುದ್ದಿ/ಗಾಸಿಪ್
Feedback Print Bookmark and Share
 
ರೌಡಿಗಳಿಗೆ, ರಾಜಕಾರಣಿಗಳಿಗೆ ಒಂದೊಂದು ಅಡ್ಡೆ, ಏರಿಯಾಗಳಿರುವುದು ಸಾಮಾನ್ಯ. ಆದರೆ ಪ್ರೇಮಿಗಳಿಗೂ ಒಂದು ಏರಿಯಾ ಇದೆ ಎಂಬುದನ್ನು ತೋರಿಸಲು ಹೊರಟಿರುವವರು ನಿರ್ದೇಶಕ ಸೂರ್ಯಕಮಲ್. ಅವರ ಹೊಸ ಚಿತ್ರಕ್ಕೆ 'ಚಾಮರಾಜಪೇಟೆ ನನ್ ಡವ್ ಏರಿಯಾ' ಎಂದು ಹೆಸರಿಟ್ಟಿದ್ದಾರೆ. ಇದರಲ್ಲಿ 'ನನ್ ಡವ್ ಏರಿಯಾ' ಎಂಬುದು ಸಬ್‌ಟೈಟಲ್.

ನಾಯಕ ಬೇರೆ ಊರಿನಿಂದ ಬೆಂಗಳೂರಿಗೆ ಬರುತ್ತಾನೆ. ಇಲ್ಲಿನ ಏರಿಯಾವೊಂದರಲ್ಲಿ ನಾಯಕಿ ಕಾಣುತ್ತಾಳೆ. ಆ ಏರಿಯಾ ಚಾಮರಾಜಪೇಟೆಯಾಗಿರುತ್ತದೆ. ಮುಂದೆ ಇವರಿಬ್ಬರ ನಡುವೆ ನಡೆಯುವ ಘಟನೆಗಳೆ ಚಿತ್ರ ಎಂದು ತಮ್ಮ ಚಿತ್ರದ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು ಸೂರ್ಯ ಕಮಲ್. ಚಿತ್ರದಲ್ಲಿ ಲವ್, ಮದರ್ ಸೆಂಟಿಮೆಂಟ್, ಪಡ್ಡೆ ಹುಡುಗರಿಗೆ ಖುಷಿ ಕೊಡುವಂತಹ ಕೆಲವು ಅಂಶಗಳು ಕೂಡಾ ಇವೆ ಎನ್ನುತ್ತಾರೆ.
MOKSHENDRA
ಚಿತ್ರದಲ್ಲಿ ನಂದ ಲವ್ಸ್ ನಂದಿತಾದ ಜಿಂಕೆಮರಿ ನಂದಿತಾ (ಶ್ವೇತಾ) ನಾಯಕಿಯಾಗಿ ನಟಿಸುತ್ತಿದ್ದು, ಜಗದೀಶ್ ಎಂಬ ಹೊಸ ಹುಡುಗ ಚಿತ್ರದ ನಾಯಕ. ನನ್ನದು ಚಿತ್ರದಲ್ಲಿ ಗಂಭೀರ ಪಾತ್ರ. ಕಾಲೇಜು ಹುಡುಗಿಯ ಪಾತ್ರ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿದರು ನಾಯಕಿ ನಂದಿತಾ.

ಚಿತ್ರಕ್ಕೆ ಅನೂಫ್ ಸೀಳೀನ್ ಸಂಗೀತ ನೀಡಿದ್ದು, ಕವಿರಾಜ್, ಸುದರ್ಶನ್, ಜಯಂತ್ ಕಾಯ್ಕಿಣಿ ಗೀತರಚನೆ ಮಾಡಿದ್ದಾರೆ. ಮಾರ್ಚ್ ವೇಳೆಗೆ ಚಿತ್ರ ಬಿಡುಗಡೆಯಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಾಮರಾಜಪೇಟೆ ನನ್ ಡವ್ ಏರಿಯಾ ನಂದಿತಾ ಜಗದೀಶ್