ಭೂತ ಬಂಗಲೆಯಲ್ಲಿ ಕಲಾಕಾರ್

ಹರೀಶ್ರಾಜ್ ನಿರ್ದೇಶಿಸಿ ನಟಿಸುತ್ತಿರುವ ಕಲಾಕಾರ್ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಹರೀಶ್ ರಾಜ್ ಅವರು ಬಹು ದಿನಗಳಿಂದ ಚಿತ್ರ ನಿರ್ದೇಶಿಸಬೇಕೆಂಬ ಕನಸು ಕಂಡಿದ್ದರು. ಈಗ ಅದು ನನಸಾಗಿದೆ. ದಿ ಕ್ಲಬ್ ಹಾಗೂ ತಾವರೆಕೆರೆಯಲ್ಲಿ ಚಿತ್ರೀಕರಣ ನಡೆಯುತ್ತಿದೆ.ಇಲ್ಲಿನ ಭೂತ ಬಂಗಲೆಯಲ್ಲಿ ಕವಿರಾಜ್ ಬರೆದಿರುವ ಆಯಾ ಆಯಾ ಸೂಪರ್ ಸ್ಟಾರ್ ಇವನೇ ನನ್ನ ಸೂಪರ್‌ಸ್ಟಾರ್ ಹೊತ್ತುಕೊಂಡು ಕನಸಿನ ಮೂಟೆ ಬಂದು ನಿಮ್ಮ ಎದುರಿಗೆ ನಿಂತೆ ಹರಸಿ ನನ್ನ ಹೆತ್ತೋರಂತೆ ಬೆಳೆಸಿ ನಿಮ್ಮ ಮಗನಂತೆ.. ಎಂಬ ಹಾಡಿಗೆ ಭೂತ ಬಂಗಲೆಯಲ್ಲಿ ಸುಮನ್‌ರಂಗನಾಥ್ ಹಾಗೂ ಹರೀಶ್‌ರಾಜ್ ಹೆಜ್ಜೆ ಹಾಕಿದರು. ಚಿತ್ರ ರಂಗದಿಂದ ದೂರವಾಗಿದ್ದ ಸುಮನ್ ರಂಗನಾಥ್ ಬುದ್ದಿವಂತ ಚಿತ್ರದ ಮೂಲಕ ಮತ್ತೆ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಚಿತ್ರಕ್ಕೆ ಸ್ವತಃ ಹರೀಶ್‌ರಾಜ್ ಅವರು ಕಥೆ, ಚಿತ್ರಕಥೆ ಬರೆದಿದ್ದಾರೆ. ಗಿರಿಧರ್ ದಿವಾನ್ ಸಂಗೀತ, ರಾಮಚಂದ್ರ ಕ್ಯಾಮರಾ ಕೈಚಳಕವಿದ್ದು, ಚಿತ್ರದಲ್ಲಿ ರಾಧಿಕಾ ಗಾಂಧಿ, ಸುಧಾನರಸಿಂಹ ರಾಜು, ಅವಿನಾಶ್, ರಾಜನ್, ವಿಶ್ವ ಮೊದಲಾದವರು ನಟಿಸಿದ್ದಾರೆ.