ಶ್ರೀಮಂತ ನಿರ್ಮಾಪಕ ಎಂದೇ ಖ್ಯಾತರಾದ ರಾಕ್‌ಲೈನ್ ವೆಂಕಟೇಶ್ ಸದ್ದಿಲ್ಲದೇ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ ಹಿಂದೆ ಗಣೇಶ್, ವಿಜಯ್‌ರ ಚಿತ್ರ ನಿರ್ಮಿಸಿದರೆ, ಈ ಬಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರ ನಿರ್ಮಿಸಲು ಮುಂದೆ ಬಂದಿದ್ದಾರೆ.
ಅವರ ಹೊಸ ಚಿತ್ರಕ್ಕೆ ಓಂಪ್ರಕಾಶ್ ರಾವ್ ಅವರನ್ನು ನಿರ್ದೇಶಕರನ್ನಾಗಿ ಮಾಡಿದ್ದಾರೆ. ತಮಿಳಿನ ಬೋಸ್ ಚಿತ್ರದ ರೀಮೇಕ್‌ನ್ನು ಇಲ್ಲಿ ಚಿತ್ರ ಮಾಡಲಾಗುತ್ತಿದೆ. ಚಿತ್ರಕ್ಕೆ ನಿಖಿತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಬೋಸ್ ಚಿತ್ರದಲ್ಲಿ ಶ್ರೀಕಾಂತ್ ಹಾಗೂ ಸ್ನೇಹಾ ಮಾಡಿದ ಪಾತ್ರವನ್ನು ಇಲ್ಲಿ ದರ್ಶನ್ ಹಾಗೂ ನಿಖಿತಾ ಮಾಡಲಿದ್ದಾರೆ. ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ.
MOKSHENDRA
ನಟಿ ನಿಖಿತಾ ಅದೃಷ್ಟ ಈ ಬಾರಿ ಖುಲಾಯಿಸಿದೆ. ದೊಡ್ಡ ಬಜೆಟ್‌ನ ಹಾಗೂ ದೊಡ್ಡ ಸ್ಟಾರ್‌ಗಳ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ಮೊನ್ನೆ ತಾನೆ ಪುನೀತ್ ಜೊತೆ ನಟಿಸಿದ ವಂಶಿ ಬಿಡುಗಡೆಯಾಗಿದೆ. ಈ ನಡುವೆ ಇವರು ನಟಿಸಿರುವ ರವಿಚಂದ್ರನ್, ಬಾಲಾಜಿ ಅಭಿನಯದ ರಾಜಕುಮಾರಿ ಹಾಗೂ ಉಪೇಂದ್ರ ನಾಯಕರಾಗಿರುವ ದುಬೈ ಬಾಬು ಚಿತ್ರ ತೆರೆಕಾಣಬೇಕಿದೆ.