ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗಾಂಧಿನಗರಕ್ಕೆ ಇನ್ನೋರ್ವ 'ಗಾಂಧಿ'
ಸುದ್ದಿ/ಗಾಸಿಪ್
Feedback Print Bookmark and Share
 
ಗಾಂಧಿನಗರಕ್ಕೆ ಮತ್ತೊಂದು ಗಾಂಧಿಯ ಪ್ರವೇಶವಾಗಿದೆ. ಇನ್ನು ಹೆಸರಿಡದ ಚಿತ್ರವೊಂದರಲ್ಲಿ ಭಾವನಾ ಗಾಂಧಿ ಎಂಬಾಕೆ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಡಾ. ಮಾಧವನ್ ಎಂಬವರು ನಾಯಕ. ಇದೊಂದು ಲವ್‌ಸ್ಟೋರಿ ಜೊತೆಗೆ ಸಸ್ಪೆನ್ಸ್ ಚಿತ್ರ ಎಂದರು ನಾಯಕ ಮಾಧವನ್.

ಚಿತ್ರವನ್ನು ಶಿವಕುಮಾರ್ ಎಂಬವರು ನಿರ್ದೇಶಿಸುತ್ತಿದ್ದಾರೆ. ಇವರಿಗಿದು 19 ನೇ ಚಿತ್ರ. ಇವರು ಹಿಂದೆ ನಂ 5 ಎಕ್ಕ ಚಿತ್ರವನ್ನು ನಿರ್ದೇಶಿಸಿದ್ದರು. ತಾವು ಪ್ರಕಾಶ್ ರೈಯಂತಹ ಘಟಾನುಘಟಿಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೇನೆ ಎಂದು ತಮ್ಮ ಬಗ್ಗೆ ಸ್ವಲ್ಪ ಹೇಳಿಕೊಂಡರು.

ನಾಯಕ 6.3 ಅಡಿ ಇದ್ದಾರೆ. ಆದ್ದರಿಂದ ಅವರ ಎತ್ತರಕ್ಕೆ ಹೊಂದಿಕೆಯಾಗುವಂತಹ ನಟಿ ಬೇಕಾದ್ದರಿಂದ ಪರಭಾಷೆಯ ನಾಯಕಿಯನ್ನು ಆಯ್ಕೆ ಮಾಡಿಕೊಂಡೆವು ಎಂದರು. ದೈವಶಕ್ತಿಗಿಂತ ಹೆಚ್ಚು ಪ್ರಪಂಚದಲ್ಲಿ ಬೇರೇನೂ ಇಲ್ಲ ಎಂಬುದನ್ನು ಚಿತ್ರದಲ್ಲಿ ತೋರಿಸಲು ಹೊರಟ್ಟಿದ್ದಾರೆ. ಹುಡುಗಿಯೊಬ್ಬಳಿಂದ ಮುಗ್ಧ ನಾಯಕನಲ್ಲಿ ಏಳುವ ಬಿರುಗಾಳಿಯ ಕಥೆಯನ್ನು ಚಿತ್ರ ಹೊಂದಿದೆಯಂತೆ.

ನಾಯಕಿ ಭಾವನಾ ಹಿಂದಿಯಲ್ಲಿ ತಕ್ ದಿನಾ ದಿನ್ ಹಾಗೂ ಪ್ರಬಂಧಿ ಚಿತ್ರದಲ್ಲಿ ನಟಿಸಿದ್ದಾರಂತೆ. ಚಿತ್ರಕ್ಕೆ ಗಂಧರ್ವ ಸಂಗೀತ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭವನಾ ಗಾಂಧಿ, ಡಾ ಮಾಧವನ್, ಶಿವಕುಮಾರ್