ಚಿಕ್ಕವನಿದ್ದಾಗಿಂದಲೂ ಪುಣ್ಯಕೋಟಿ ಕತೆಯನ್ನು ಚಿತ್ರ ಮಾಡಬೇಕೆಂಬ ಆಸೆ ಇತ್ತು. ಅದು ಈಡೇರಿದ್ದು ಸಂತಸವಾಗಿದೆ ಎಂದರು ನಿರ್ದೇಶಕ ಎಸ್. ಮಹೇಂದರ್. ಪತ್ರಕರ್ತರಿಗಾಗಿ ಆಯೋಜಿಸಿದ ಅಕ್ಕ-ತಂಗಿ ಚಿತ್ರದ ಪೂರ್ವಭಾವಿ ಪ್ರದರ್ಶನದ ನಂತರ ಅವರು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.
ಇಂತಹ ಚಿತ್ರಗಳನ್ನು ವ್ಯಾಪಾರಿ ದೃಷ್ಟಿಯಿಂದ ನಿರ್ಮಿಸುವುದು ಕಷ್ಟ. ಇವುಗಳಿಗೆ ಕಾಲಮಾನ ಇಲ್ಲ. ಆದರೂ ನನ್ನ ಊರಿನ ಭಾಷೆ, ಪರಿಸರ ಬಳಸುವ ಆಸೆ ಇತ್ತು. ಅದು ಈಗ ಈ ಚಿತ್ರದ ಮೂಲಕ ಈಡೇರಿದೆ. ಅಕ್ಕ-ತಂಗಿಯರಾಗಿ ಶ್ರುತಿ ಹಾಗೂ ರಶ್ಮಿ ಮುಖ ಹೊಂದಿಕೆಯಾಗಿದ್ದರಿಂದ ಸಂತಸಗೊಂಡ ಅವರು ಇಡೀ ಚಿತ್ರತಂಡದ ಶ್ರಮದಿಂದ ಈ ಚಿತ್ರ ರೂಪುಗೊಂಡಿದೆ ಎಂದರು.
ನಿರ್ದೇಶಕರು ಹೇಳಿದ ಹಾಗೆ ಮಾಡಿದ್ದೇನೆ. ಅವರ ಕಲ್ಪನೆಗೆ ಹೊಂದಿಕೊಳ್ಳುವ ಕೆಲಸವಷ್ಟೇ ಕಲಾವಿದರದು ಎಂದರು ಶ್ರುತಿ. ಈ ಚಿತ್ರದಲ್ಲಿನ ಹೈಲೈಟ್ ಹೀರೋ ಕಥೆ ಹಾಗೂ ಅದರಲ್ಲಿನ ಹುಲಿ ಪಾತ್ರ. ನಾನು ಪ್ರೇಕ್ಷಕರ ಕನಸಿನ ನಾಯಕಿಯಲ್ಲ. ಮನಸಿನ ನಾಯಕಿ ಎಂದರು ಕಣ್ಣೀರ ತಾರೆ ಶ್ರುತಿ.
MOKSHENDRA
ಹಳ್ಳಿಯ ವಾತಾವರಣವನ್ನು ತೆರೆ ಮೇಲೆ ತರುವುದರಲ್ಲಿ ಮಹೇಂದರ್ ನಿಸ್ಸೀಮ ಎಂದು ಹೊಗಳಿದ ನಿರ್ಮಾಪಕ ರಮೇಶ್ ಯಾಧವ್ ನಾನು ಶ್ರುತಿ ಫ್ಯಾನ್ ಎಂದರು.