ಒಂದು ಹಂತದ ಚಿತ್ರೀಕರಣ ಮುಗಿಸಿ ಎರಡನೇ ಹಂತದ ಚಿತ್ರೀಕರಣಕ್ಕೆ ಮುನ್ನ ಗಗನ ಚುಕ್ಕಿ ಚಿತ್ರತಂಡ ಪತ್ರಕರ್ತರೆದುರು ಬಂದಿತ್ತು. ನಾಯಕನ ಹೆಸರು ಗಗನ. ನಾಯಕಿಯ ಹೆಸರು ಚುಕ್ಕಿ. ಆದ್ದರಿಂದ ಗಗನ ಚುಕ್ಕಿ. ಒಬ್ಬಳು ನಾಯಕನ ಪ್ರೇಮ ಕಥೆಗೆ ಪೂರ್ಣವಿರಾಮ ಕೊಟ್ಟಿದ್ದರಿಂದ ಆ ಹೆಸರೇ ಸೂಕ್ತ ಎಂದರು ನಿರ್ದೇಶಕ ಗೋವಿಂದರಾಜು.
ಇವರು ಹಿಂದೆ ಚೇರನ್, ಭಾರತಿಶಂಕರ್ ಮೊದಲಾದ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಈಗ ಅಕುಲ್, ಭಾವನಾ ರಾವ್ ಹಾಗೂ ಸಂಚಿತಾ ಶೆಟ್ಟಿ ಇರುವ ಸಿನಿಮಾ ಮಾಡುತ್ತಿದ್ದಾರೆ. ಪ್ರೀತಿಯಲ್ಲಿ ವಿಫಲನಾದರೂ ಜೀವನದಲ್ಲಿ ವಿಫಲವಾಗಬಾರದು ಎಂಬ ಸಂದೇಶವನ್ನು ನಿರ್ದೇಶಕರು ಹೇಳಲು ಹೊರಟ್ಟಿದ್ದಾರೆ.
MOKSHENDRA
ನಾಯಕ-ನಾಯಕಿ ಹೇಗೆ ಸಿಗುತ್ತಾರೆ ಮುಂದೇನು ಮಾಡುತ್ತಾರೆ ಎಂಬುದೇ ಸಿನಿಮಾದ ಮುಖ್ಯ ಅಂಶ ಎಂದು ಹೇಳಿಕೊಂಡರು ನಿರ್ದೇಶಕ ಗೋವಿಂದರಾಜು. ನಾನು ನಿಜ ಜೀವನದಲ್ಲಿ ಮಾಡದ್ದನ್ನು ಈ ಸಿನಿಮಾದಲ್ಲಿ ಮಾಡುತ್ತಿರುವುದಾಗಿ ಹೇಳಿ ಗೊಲ್ಲನೆ ನಕ್ಕರು ನಾಯಕ ಅಕುಲ್. ಇದರಲ್ಲಿ ಇವರದ್ದು ಜವಾಬ್ದಾರಿಯುತ ಪಾತ್ರವಂತೆ. ಚಿತ್ರವನ್ನು ನೀತೀನ್ ಜೈನ್ ನಿರ್ಮಿಸುತ್ತಿದ್ದಾರೆ.