ಉಲ್ಲಾಸದ ಉತ್ಸಾಹ ಚಿತ್ರದ ಶೂಟಿಂಗ್ ಸೆಟ್‌ನಿಂದ ನಟಿ ಶ್ರದ್ದಾ ಆರ್ಯ ಓಡಿ ಹೋಗಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಆದರೆ ಅದರ ನಾಯಕ ಗಣೇಶ್ ಮಾತ್ರ ಈ ಮಾತನ್ನು ಅಲ್ಲಗಳೆಯುತ್ತಾರೆ.
ಮೈಸೂರಿನಲ್ಲಿ ಒಂದು ಸುತ್ತಿನ ಚಿತ್ರೀಕರಣವಾಗಿದೆ. ಬೆಂಗಳೂರಿಗೆ ಬಂದಿರುವ ಗಣೇಶ್ ಈಗ ವಿವಾದದ ಬಗ್ಗೆ ಮಾತನಾಡಿದ್ದಾರೆ. ಉಲ್ಲಾಸದ ಉತ್ಸಾಹ ಚಿತ್ರದ ಚಿತ್ರೀಕರಣಕ್ಕೆ ಶ್ರದ್ದಾ ಒಂದು ದಿನ ಕೂಡ ಬಂದಿಲ್ಲ. ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ ಎಂದು ವಿವಾದಕ್ಕೆ ತೆರೆ ಎಳೆದಿದ್ದಾರೆ.
ಚಿತ್ರಕ್ಕೆ ನಾಯಕಿಯರಿಲ್ಲದಿದ್ದರೆ ಏನಂತೆ ಚಿತ್ರೀಕರಣ ಸಾಂಗವಾಗಿ ನಡೆಯುತ್ತಿದೆ. ಈಗಾಗಲೇ ಮುಂಬೈನ ಮೂವರು ಮಾಡಲಿಂಗ್ ಹುಡುಗಿಯರಲ್ಲಿ ಒಬ್ಬರನ್ನು ನಾಯಕಿ ಸ್ಥಾನಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು ಗಣೇಶ್. ಅಂದ ಮೇಲೆ ಓಡಿ ಹೋಗುವ ಮಾತೆಲ್ಲಿ ಬಂತು ಅಲ್ವಾ?